ಉಡುಪಿಯ ಕಮಲಾಕ್ಷಿ ಸೊಸೈಟಿಯಲ್ಲಿ ನೂರಾರು ಕೋಟಿ ರೂ. ವಂ#ಚನೆ ಹಗರಣ: ಅಧ್ಯಕ್ಷ ಬಿ.ವಿ. ಲಕ್ಷ್ಮೀ ನಾರಾಯಣ ಬಂಧನ

ಉಡುಪಿಯ ಕಮಲಾಕ್ಷಿ ಸೊಸೈಟಿಯಲ್ಲಿ ನೂರಾರು ಕೋಟಿ ರೂ. ವಂ#ಚನೆ ಹಗರಣ: ಅಧ್ಯಕ್ಷ ಬಿ.ವಿ. ಲಕ್ಷ್ಮೀ ನಾರಾಯಣ ಬಂಧನ

ಉಡುಪಿ (Headlines Kannada): ಠೇಣಿದಾರರಿಗೆ ನೂರಾರು ಕೋಟಿ ರೂ. ವಂ#ಚಿಸಿ ತಲೆಮರೆಸಿಕೊಂಡಿದ್ದ ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಬಿ.ವಿ. ಲಕ್ಷ್ಮೀ ನಾರಾಯಣ ಉಪಾಧ್ಯಾಯ ಎಂಬಾತನನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬುಧವಾರ ತಡರಾತ್ರಿ ಬಂಧಿಸಿದ್ದಾರೆ.

ಆರೋಪಿ ಲಕ್ಷ್ಮೀನಾರಾಯಣ ಹೆಚ್ಚಿನ ಬಡ್ಡಿಯ ಆ#ಮಿಷವೊಡ್ಡಿ ಹಲವಾರು ಮಂದಿಯಿಂದ ಕೋಟ್ಯಾಂತರ ರೂ. ಸಂಗ್ರಹಿಸಿ, ಹಿಂದಿರುಗಿಸದೆ ವಂ#ಚಿಸಿದ್ದನು. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಹಲವು ಠೇವಣಿದಾರರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಗೆ ಇಳಿದ ಸೆನ್ ಪೊಲೀಸರು ಬ್ರಹ್ಮಾವರದ ಮಟಪಾಡಿ ಎಂಬಲ್ಲಿ ಆರೋಪಿ ಲಕ್ಷ್ಮೀನಾರಾಯಣನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Ads on article

Advertise in articles 1

advertising articles 2

Advertise under the article