ಸೌದಿಯಲ್ಲಿ ಸಂಭವಿಸಿದ ರಸ್ತೆ ಅ#ಪಘಾತದಲ್ಲಿ ತಡಂಬೈಲ್'ನ ಯುವಕ ದು#ರ್ಮರಣ
ಸೌದಿ ಅರೇಬಿಯಾ(Headlines Kannada): ಸೌದಿಯ ಅಲ್-ಹಸ್ಸದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ರಸ್ತೆ ಅ#ಪಘಾತದಲ್ಲಿ 29 ವರ್ಷ ಪ್ರಾಯದ ಸುರತ್ಕಲ್ ತಡಂಬೈಲ್ ಮೂಲದ ಫಾಝಿಲ್ ಎಂಬಾತ ಸಾ#ವನ್ನಪ್ಪಿದ್ದಾನೆ.
ಫಾಝಿಲ್ ಸುರತ್ಕಲ್ ತಡಂಬೈಲ್ ಫಾತಿಮಾ ಸೂಪರ್ ಮಾರ್ಕೆಟ್'ನ ಅಬ್ದುಲ್ ಖಾದರ್ ಹಾಗೂ ಬೀಫಾತಿಮಾ ಎಂಬವರ ಪುತ್ರನಾಗಿದ್ದಾನೆ. ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಫಾಝಿಲ್'ಗೆ ಸಣ್ಣ ಮಗು ಇದೆ. ಫಾಝಿಲ್ ತನ್ನ ಪತ್ನಿ ಮಗುವಿನೊಂದಿಗೆ ಸೌದಿ ಅರೇಬಿಯಾದಲ್ಲೇ ವಾಸವಾಗಿದ್ದರು.
ಫಾಝಿಲ್ ಚಲಾಯಿಸಿಕೊಂಡು ಬರುತ್ತಿದ್ದ ಕಾರಿಗೆ ಟ್ರೈಲರ್ ಟ್ರಕ್ ವಾಹನ ಡಿ#ಕ್ಕಿ ಹೊಡೆದಿದ್ದು, ಈ ಅಪಘಾತ ರಾತ್ರಿ ಸುಮಾರು 7:30 (ಸೌದಿ ಸಮಯ)ರ ವೇಳೆಗೆ ಸೌದಿಯ ಜುಬೈಲ್-ಅಲ್ಹಸ್ಸ ಎಂಬಲ್ಲಿ ಸಂಭವಿಸಿದೆ. ಅಪಘಾತ ನಡೆದ ಸ್ಥಳದಲ್ಲಿಯೇ ಫಾಝಿಲ್ ಸಾ#ವನ್ನಪ್ಪಿದ್ದಾನೆ.
ಸುರತ್ಕಲ್ ತಡಂಬೈಲಿನ ಫಾಝಿಲ್ ಕಳೆದ 5 ವರ್ಷಗಳಿಂದ ಸೌದಿಯ ಜುಬೈಲಿನ ಅಲ್ ಬತೀನಿ ಸ್ಕಫೋಲ್ಡಿಂಗ್ ಕೊಂಟ್ರಾಕ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ ಹಸ್ಸದ ಅಲ್ ಜೂಫ್ರಾನ್ ಪ್ರಾಜೆಕ್ಟ್ ಸೈಟಿಗೆ ಭೇಟಿ ನೀಡಿ ಹಿಂದಿರುಗುತ್ತಿದ್ದ ಸಂಧರ್ಭದಲ್ಲಿ, ರಿಯಾದ್ ನಿಂದ ಸುಮಾರು 260 km ದೂರದಲ್ಲಿ ಈ ಅ#ಪಘಾತ ಸಂಭಾವಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಫಾಝಿಲ್ ಮೃ#ತದೇಹವನ್ನು ಹತ್ತಿರದ ಅಬ್ಕೆಕ್ ಆಸ್ಪತ್ರೆ ಯಲ್ಲಿ ಇರಿಸಲಾಗಿದೆ.