
ಉಡುಪಿ ಕಮಲಾಕ್ಷಿ ಸೊಸೈಟಿ ನೂರಾರು ಕೋಟಿ ರೂ.ವಂ#ಪ್ರಕರಣ; ಆರೋಪಿ ಲಕ್ಷ್ಮೀನಾರಾಯಣಗೆ ಜ.11ರ ವರೆಗೆ ನ್ಯಾಯಾಂಗ ಬಂಧನ
ಉಡುಪಿ (Headlines Kannada): ಠೇವಣಿದಾರರಿಗೆ ವಂ#ಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಬಿ.ವಿ.ಲಕ್ಷ್ಮೀನಾರಾಯಣ ಉಪಾಧ್ಯಾಯ ಎಂಬಾತನಿಗೆ 14 ದಿನಗಳ ಕಾಲ, ಜ.11ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಇಂದು ಆದೇಶ ನೀಡಿದೆ.
ಬಿ.ವಿ. ಲಕ್ಷ್ಮೀನಾರಾಯಣ ಉಪಾಧ್ಯಾಯ ಠೇವಣಿದಾರರಿಗೆ ನೂರಾರು ಕೋಟಿ ರೂಪಾಯಿ ವಂ#ಚಿಸಿ ತಲೆಮರೆಸಿಕೊಂಡಿದ್ದನು. ಈ ಕುರಿತಂತೆ ಕೆಲವು ಠೇವಣಿದಾರರು ಲಕ್ಷ್ಮೀನಾರಾಯಣ ವಿರುದ್ಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ವಂಚನೆ ಕೇಸ್ ದಾಖಲಿಸಿದ್ದರು. ಅದರಂತೆ ತನಿಖೆಗೆ ಇಳಿದ ಸೆನ್ ಪೊಲೀಸರು ಬ್ರಹ್ಮಾವರ ಮಟಪಾಡಿಯಲ್ಲಿ ಆರೋಪಿ ಲಕ್ಷ್ಮೀನಾರಾಯಣನನ್ನು ಬುಧವಾರ ಬಂಧಿಸಿದ್ದರು.
ಇಂದು ಆರೋಪಿಯನ್ನು ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು, ಕಿರಿಯ ವಿಭಾಗ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದ್ದರು. ಆರೋಪಿ ತನ್ನ ವಕೀಲರ ಮೂಲಕ ಈಗಾಗಾಲೇ ಜಾಮೀನು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಜ.2ಕ್ಕೆ ನಡೆಯಲಿದೆ ಎಂದು ತಿಳಿದುಬಂದಿದೆ.