ದಲಿತರು ಕುಡಿಯುವ ನೀರಿನ ಟ್ಯಾಂಕಿಗೆ ಮ#ಲ ಸು#ರಿದು ವಿ#ಕೃತಿ ಮೆರೆದ ದು#ಷ್ಕರ್ಮಿಗಳು; ಅನಾರೋಗ್ಯಕ್ಕೀಡಾದ ಅನೇಕ ಮಕ್ಕಳು
ಭೇಟಿ ನೀಡಿ ಪರಿಶೀಲನೆ ನಡೆಸಿದ DC -SP
ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಕುಡಿಯುವ ನೀರನ್ನು ಪೂರೈಸುವ 10,000 ಲೀ. ನೀರಿನ ಟ್ಯಾಂಕಿಯಲ್ಲಿ ಅಪಾರ ಪ್ರಮಾಣದ ಮಾನವನ ಮ#ಲ ಪತ್ತೆಯಾಗಿದೆ. ಈ ಬಗ್ಗೆ ದೂರು ನೀಡಿರುವ ಹಿನ್ನೆಲೆ ಪುದುಕೊಟ್ಟೈ ಡಿಸಿ ಕವಿತಾ ರಾಮು ಹಾಗೂ ಜಿಲ್ಲಾ ಪೊಲೀಸ್ ಮುಖ್ಯಸ್ಥ ವಂದಿತಾ ಪಾಂಡೆ ಇರಾಯೂರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿ#ಕೃತಿ ಬೆಳಕಿಗೆ ಬಂದಿದ್ದು ಹೀಗೆ....
ಇತ್ತೀಚಿಗೆ ಗ್ರಾಮದಲ್ಲಿ ಅನೇಕ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರು. ಕುಡಿಯುವ ನೀರಿನಲ್ಲಿ ಸಮಸ್ಯೆಯಿಂದ ಮಕ್ಕಳು ಅನಾರೋಗ್ಯಕ್ಕೀಡಾಗಿರಬಹುದು ಎಂದು ವೈದ್ಯರು ಸೂಚಿಸಿದ ಬಳಿಕ ಗ್ರಾಮಸ್ಥರು ನೀರಿನ ಟ್ಯಾಂಕ್ ಹತ್ತಿ ಪರಿಶೀಲಿಸಿದ್ದಾರೆ. ಈ ವೇಳೆ ಮ#ಲ ಸುರಿದಿರುವ ವಿ#ಕೃತ ಕೃ#ತ್ಯ ಬೆಳಕಿಗೆ ಬಂದಿದೆ.
ಅಪಾರ ಪ್ರಮಾಣದ ನೀರಿನ ತೊಟ್ಟಿಗೆ ಸುರಿದ ಮ#ಲ
ಟ್ಯಾಂಕ್ ಪರಿಶೀಲಿಸಿದಾಗ ಕುಡಿಯುವ ನೀರು ಹಳದಿ ಬಣ್ಣಕ್ಕೆ ತಿರುಗುವಷ್ಟು ಅಪಾರ ಪ್ರಮಾಣದ ಮ#ಲವನ್ನು ನೀರಿನ ತೊಟ್ಟಿಗೆ ಸುರಿದಿರುವುದು ಕಂಡುಬಂದಿದೆ. ಇದಾವುದನ್ನೂ ತಿಳಿಯದೇ ಮುಗ್ಧ ಗ್ರಾಮಸ್ಥರು ಕಳೆದ ಒಂದು ವಾರದಿಂದ ಈ ನೀರನ್ನು ಸೇವಿಸುತ್ತಿದ್ದರು. ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಂತೆ ಸತ್ಯ ಬೆಳಕಿಗೆ ಬಂದಿದೆ ಎಂದು ಗ್ರಾಮದ ರಾಜಕೀಯ ಕಾರ್ಯಕರ್ತ ಮೋಕ್ಷ ಗುಣವಲಗನ್ ಸ್ಪಷ್ಟಪಡಿಸಿದ್ದಾರೆ.
ಈ ಗ್ರಾಮದಲ್ಲಿ ಆಚರಣೆಯಲ್ಲಿರುವ ಅ#ಸ್ಪೃಶ್ಯತೆ
ತಮಿಳುನಾಡಿನ ಈ ಗ್ರಾಮದಲ್ಲಿ ಇಂದಿಗೂ ದಲಿತರ ಮೇಲಿನ ಅ#ಸ್ಪೃಶ್ಯತೆ ಆಚರಣೆಯಲ್ಲಿದ್ದು, ಸ್ಥಳೀಯ ಚಹಾ ಅಂಗಡಿಯಲ್ಲಿಯ್ಯೂ ಪ್ರತ್ಯೇಕ ಗ್ಲಾಸ್‌ಗಳ ವ್ಯವಸ್ಥೆ ಇದೆ. ಇಲ್ಲಿನ ದೇವಸ್ಥಾನಗಳ ಆವರಣದಲ್ಲಿ ಇಂದಿಗೂ ದಲಿತರಿಗೆ ಪ್ರವೇಶವಿಲ್ಲ ಎಂದು ದೂರಲಾಗುತ್ತಿದೆ.
ದೂರು ದಾಖಲು
ಈ ಗ್ರಾಮದ ಅನಾರೋಗ್ಯಕ್ಕೀಡಾದ ಮಗುವೊಂದರ ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಸೆಕ್ಷನ್ 277, 328 ಅನ್ವಯ ಹಾಗೂ ಪರಿಶಿಷ್ಟ ಜಾತಿ, ಪಂಗಡ ದೌ#ರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಲಿತರನ್ನು ದೇವಾಲಯಗಳಿಗೆ ಕರೆದುಕೊಂಡು ಹೋದ DC -SP
ಇಲ್ಲಿನ ಕೆಲವು ಮಂದಿ ದಲಿತರನ್ನು ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ತಮ್ಮೊಂದಿಗೆ ದೇವಾಲಯಗಳಿಗೆ ಕರೆದುಕೊಂಡು ಹೋಗಿದ್ದು, ಜಾತಿ ತಾ#ರತಮ್ಯ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಮ#ಲ ಮಿಶ್ರಿತ ನೀರು ಸೇವಿಸಿ ಅನಾರೋಗ್ಯಕ್ಕೀಡಾದವರ ಚಿಕಿತ್ಸೆಗೆ ಗ್ರಾಮದಲ್ಲಿ ವಿಶೇಷ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ.