ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ 3.30 ಕೋಟಿ ರೂ.ಕಾಣಿಕೆ ಸಂಗ್ರಹ

ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ 3.30 ಕೋಟಿ ರೂ.ಕಾಣಿಕೆ ಸಂಗ್ರಹ


ರಾಯಚೂರು(Headlines Kannada): ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ 1 ತಿಂಗಳಿಂದ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಹಣ ಸಂಗ್ರಹವಾಗಿದ್ದು, ನವೆಂಬರ್-ಡಿಸೆಂಬರ್ ತಿಂಗಳ ಕಳೆದ 34 ದಿನಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣವಾಗಿದ್ದು, ನಾಣ್ಯ ಮತ್ತು ನೋಟುಗಳು ಸೇರಿ ಒಟ್ಟು 3 ಕೋಟಿ 30 ಲಕ್ಷದ 20 ಸಾವಿರದ 636 ರೂ. ಕಾಣಿಕೆ ಸಂಗ್ರಹವಾಗಿದೆ.

ಸಿಕ್ಕಿದ ಕಾಣಿಕೆ ವಿವರ...

ಭಕ್ತರಿಂದ 0.95 ಗ್ರಾಂ ಚಿನ್ನ ಮತ್ತು 1 ಕೆ.ಜಿ.300 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಎರಡು ತಿಂಗಳ ಹಿಂದೆ, ಅಂದರೆ  ಅಕ್ಟೋಬರ್ ನವೆಂಬರ್ ತಿಂಗಳುಗಳ 36 ದಿನಗಳಲ್ಲಿ 3 ಕೋಟಿ 20 ಲಕ್ಷ ರೂ. ಸಂಗ್ರಹವಾಗಿತ್ತು. ಸೆಪ್ಟೆಂಬರ್- ಅಕ್ಟೋಬರ್ ತಿಂಗಳ 20 ದಿನಗಳಲ್ಲಿ 1,98,17,614 ರೂ. ಸಂಗ್ರಹವಾಗಿತ್ತು. ಈ ಬಾರಿ 34 ದಿನಗಳ ಕಾಣಿಕೆ ಎಣಿಕೆ ಇದ್ದಿದ್ದರಿಂದ ಸತತವಾಗಿ 2 ದಿನಗಳ ಕಾಲ ನಾಣ್ಯ ಮತ್ತು ನೋಟುಗಳ ಎಣಿಕೆ ಕಾರ್ಯ ನಡೆಯಿತು. ಎಣಿಕೆ ಕಾರ್ಯ ಸಂಪೂರ್ಣ ಮುಕ್ತಾಯವಾಗಿರುವ ಕುರಿತು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ. 

Ads on article

Advertise in articles 1

advertising articles 2

Advertise under the article