
'ಈ ರೊಟ್ಟಿಯನ್ನು ನಾ#ಯಿ ಸಹ ತಿನ್ನಲ್ಲ' ಎಂದಿದ್ದ ಯುಪಿಯ ಪೊಲೀಸ್ ಪೇದೆಗೆ ನೀಡಲಾಗಿದ್ದ 600 ಕಿಮೀ ದೂರದ ವರ್ಗಾ#ವಣೆಗೆ ಹೈಕೋರ್ಟ್ ತಡೆ
ಉತ್ತರ ಪ್ರದೇಶದ ಫಿರೋಜಾಬಾದ್ ಪೊಲೀಸ್ ಲೈನ್‌ನ ಮೆಸ್‌ನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಪೇದೆ ಮನೋಜ್ ಕುಮಾರ್ ಎಂಬವರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಅವರಿಗೆ 600 ಕಿಮೀ ದೂರದ ಜಿಲ್ಲೆಗೆ ವರ್ಗಾವಣೆ ಮಾಡಿ ಶಿ#ಕ್ಷೆ ನೀಡಲಾಗಿತ್ತು.
ಫಿರೋಜಾಬಾದ್ ಪೊಲೀಸ್ ಲೈನ್‌ನ ಹೊರಗೆ ಕಣ್ಣೀರು ಸುರಿಸುತ್ತಾ, ಕೈಯಲ್ಲಿ ಆಹಾರದ ತಟ್ಟೆಯೊಂದಿಗೆ ತನ್ನ ಅವಸ್ಥೆಯನ್ನು ಎತ್ತಿ ತೋರಿಸುತ್ತಿರುವ ವೀಡಿಯೊ ವೈರಲ್ ಆಗಿದ್ದು, ಬಳಿಕ 26 ವರ್ಷದ ಕಾನ್‌ಸ್ಟೆಬಲ್ ಮನೋಜ್ ಕುಮಾರ್ ಅವರನ್ನು 'ದೀರ್ಘ ರಜೆ' ಮೇಲೆ ಕಳುಹಿಸಲಾಗಿತ್ತು
ಅನಂತರ ಫಿರೋಜಾಬಾದ್‌ನಿಂದ ಗಾಜಿಪುರಕ್ಕೆ ವರ್ಗಾವಣೆಗೊಂಡ ಮನೋಜ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ಪಂಕಜ್ ಭಾಟಿಯಾ, ವರ್ಗಾವಣೆಗೆ ತಡೆ ನೀಡಿ ಈ ಆದೇಶ ನೀಡಿದ್ದಾರೆ.
2022ರ ಸೆಪ್ಟೆಂಬರ್ 20 ರ ವರ್ಗಾವಣೆ ಆದೇಶವು ಆಡಳಿತಾತ್ಮಕ ಆಧಾರದ ಮೇಲೆ ಮಾಡಲಾಗಿದೆ ಎಂದು ನ್ಯಾಯಾಲಯದಲ್ಲಿ ಹೇಳಿದ್ದರೂ, ಪೊಲೀಸ್ ಮೆಸ್‌ನಲ್ಲಿ ನೀಡಲಾಗುತ್ತಿರುವ ಕಳಪೆ ಆಹಾರದ ವಿರುದ್ಧ ಪ್ರತಿಭಟಿಸಿದ್ದರಿಂದ ಮನೋಜ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.
ಅರ್ಜಿದಾರ ಮನೋಜ್ ಕುಮಾರ್ ಅವರ ವಾದವನ್ನು ಆಲಿಸಿದ ನ್ಯಾಯಾಲಯ, ಈ ವಿಚಾರವನ್ನು ಪರಿಗಣಿಸುವ ಅಗತ್ಯವಿದೆ. ಪ್ರತಿವಾದಿಗಳು 4 ವಾರಗಳಲ್ಲಿ ಅಫಿಡವಿಟ್ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿದಾರರು ಮರುಪ್ರಮಾಣ ಪತ್ರ ಸಲ್ಲಿಸಲು 4 ವಾರಗಳ ಕಾಲಾವಕಾಶ ನೀಡಬೇಕು ಎಂದಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 28ಕ್ಕೆ ಮುಂದೂಡಲಾಗಿದೆ.