
ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಗೆ ಅಧ್ಯಕ್ಷರಾಗಿ ಕೆ.ಎಸ್.ಮುಹಮ್ಮದ್ ಮಸೂದ್ ಪುನಾರಾಯ್ಕೆ
ಅಧ್ಯಕ್ಷ ಸ್ಥಾನಕ್ಕೆ ಕೆ. ಎಸ್. ಮುಹಮ್ಮದ್ ಮಸೂದ್ ಅವರು ನಾಮಪತ್ರ ಸಲ್ಲಿಸಿರುವುದರಿಂದ ಮಹಾಸಭೆಯಲ್ಲಿ ಅವರನ್ನು ಮುಂದಿನ 3 ವರ್ಷಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮಂಗಳೂರಿನ ಬದ್ರಿಯಾ ಕಾಲೇಜಿನ ಪ್ರಾಂಶುಪಾಲರಾದ ಯೂಸುಫ್ ಅವರು ಚುನಾವಣಾ ಮೆಲ್ವೀಚಾರಿಕರಾಗಿ ಹಾಜರಿದ್ದರು.
ಇಲ್ಲಿನ ಕುದ್ರೋಳಿ ಜಾಮಿಯಾ ಮಸೀದಿಯ ಖತೀಬರಾದ ಅಬ್ದುಲ್ ಮನ್ನಾನ್ ಮುಫ್ತಿಯವರು ದುವಾದೊಂದಿಗೆ ಮಹಾಸಭೆಯೂತ್ ಆರಂಭಗೊಂಡಿತ್ತು. ಸಂಸ್ಥೆಯ ವಾರ್ಷಿಕ ವರದಿ ಹಾಗೂ ಲೆಕ್ಕ ಪರಿಶೋಧಕರಿಂದ ಪರಿಶೋಧಿಸಲ್ಪಟ್ಟ ಬ್ಯಾಲೆಸ್ಸ್ ಶೀಟನ್ನು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಅವರು ಸಭೆಯ ಮುಂದಿಟ್ಟು ಓದಿ ಹೇಳಿದರು. ಹೊಸತಾಗಿ ಚುನಾಯಿತರಾದ ಅಧ್ಯಕ್ಷರಾದ ಕೆ.ಎಸ್.ಮುಹಮ್ಮದ್ ಮಸೂದ್ ಸಂದರ್ಭೋಚಿತವಾಗಿ ಮಾತನಾಡಿದರು. ಮಹಾಸಭೆಯಾ ಕೊನೆಯಲ್ಲಿ ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್ ವಂದನಾರ್ಪಣೆಗೈದರು.
ಅಭಿನಂದಿಸಿದ ಅಬ್ದುಲ್ ಕರೀಂ HKH ಶಿರಸಿ
ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯಾ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಕೆ.ಎಸ್.ಮುಹಮ್ಮದ್ ಮಸೂದ್ ಅವರಿಗೆ ಹಾನಗಲ್ ದಾರುಲ್ ಹುದಾ ಯುನಿವೆರ್ಸಿಟಿ ಸಂಚಾಲಕ, ಖ್ಯಾತ ಉದ್ಯಮಿ, ಸಮಾಜ ಸೇವಕ, ಕೊಡುಗೈ ದಾನಿ ಶಿರಸಿಯ ಕೆ.ಅಬ್ದುಲ್ ಕರೀಂ HKH ಅಭಿನಂದನೆ ಸಲ್ಲಿಸಿದ್ದಾರೆ.
ಪುನರಾಯ್ಕೆಯಾಗಿರುವ ಕೆ.ಎಸ್.ಮುಹಮ್ಮದ್ ಮಸೂದ್ ಅವರಿಂದ ಮುಸ್ಲಿಂ ಸಮುದಾಯ ಮತ್ತಷ್ಟು ಕಾರ್ಯ, ಸೇವೆಗಳು ಆಗಲಿ ಎಂದು ಅಬ್ದುಲ್ ಕರೀಂ HKH ಶುಭ ಹಾರೈಸಿದ್ದಾರೆ.