ರಾಜ್‌ಕುಮಾರ್​ ಕುಟುಂಬದ  ಬಗ್ಗೆ ಕೆಟ್ಟದಾಗಿ ಮಾತನಾಡಿದ ಆರೋಪ: ಪುನೀತ್ ಕೆರೆಹಳ್ಳಿಗೆ ಧ#ರ್ಮದೇಟು! ವೈರಲ್ ಆದ ವೀಡಿಯೊ

ರಾಜ್‌ಕುಮಾರ್​ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದ ಆರೋಪ: ಪುನೀತ್ ಕೆರೆಹಳ್ಳಿಗೆ ಧ#ರ್ಮದೇಟು! ವೈರಲ್ ಆದ ವೀಡಿಯೊ

ಬೆಂಗಳೂರು(Headlines Kannada): ವರನಟ ಡಾ.ರಾಜ್‌ಕುಮಾರ್​ ಕುಟುಂಬದ  ಬಗ್ಗೆ ಕೆಟ್ಟದಾಗಿ ಮಾತಾಡಿದ್ದ ಆರೋಪದ ಮೇರೆಗೆ ಹಿಂದುತ್ವ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಪುನೀತ್​ ಕೆರೆಹಳ್ಳಿಗೆ ಕನ್ನಡಪರ ಹೋರಾಟಗಾರರು ಧ#ರ್ಮದೇಟು ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದ್ದು, ರಾಜ್ ಕುಮಾರ್ ಕುಟುಂಬದ  ಬಗ್ಗೆ ಹಗುರವಾಗಿ ಮಾತನಾಡಿದ್ದೀಯಾ? ನೀನು ಕ್ಷಮೆ ಕೇಳಬೇಕು ಎಂದು ತಂಡ ಕೋಗಾತ ನಡೆಸದಿದ್ದ ಬಳಿಕ ಪುನೀತ್ ಕೆರೆಹಳ್ಳಿ ಮೇಲೆ ಹ#ಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ.

ಪುನೀತ್​ ಕೆರೆಹಳ್ಳಿಗೆ ಧ#ರ್ಮದೇಟು ನೀಡಿದ್ದು ಶಿವಕುಮಾರ್ ನಾಯ್ಕ್ ಬಣ ಎಂದು ಹೇಳಲಾಗುತ್ತಿದೆ. ಈ ಘಟನೆಗೂ ಮುನ್ನ ಪುನೀತ್ ಕೆರೆಹಳ್ಳಿಗೆ ಈ ಬಗ್ಗೆ ಕರೆ ಮಾಡಿ ಕ್ಷಮೆ ಕೇಳುವಂತೆ ಹೇಳಲಾಗಿತ್ತು. ಆದರೆ, ಈ ವೇಳೆ ಕ್ಷಮೆ ಕೇಳಲು ನಿರಾಕರಿಸಿದ ಪುನೀತ್ ಕೆರೆಹಳ್ಳಿ, ನಾನು ಚಾಮರಾಜಪೇಟೆಯಲ್ಲೇ ಇದ್ದೇನೆ, ಬರೋದಾದ್ರೆ ಬನ್ನಿ ಎಂದು ಅವಾಜ್ ಹಾಕಿದ್ದಾನೆ ಎಂದು ಹೇಳಲಾಗಿದೆ. 


Ads on article

Advertise in articles 1

advertising articles 2

Advertise under the article