ದೇಶದಲ್ಲಿ RSS-BJP ದ್ವೇ#ಷ ಹರಡುವುದನ್ನು ಬಿಟ್ಟು ಬೇರೆ ಏನೂ ಮಾಡಿಲ್ಲ: ರಾಹುಲ್ ಗಾಂಧಿ ಕಿಡಿ

ದೇಶದಲ್ಲಿ RSS-BJP ದ್ವೇ#ಷ ಹರಡುವುದನ್ನು ಬಿಟ್ಟು ಬೇರೆ ಏನೂ ಮಾಡಿಲ್ಲ: ರಾಹುಲ್ ಗಾಂಧಿ ಕಿಡಿ

ನವದೆಹಲಿ(Headlines Kannada): RSS ಹಾಗು BJPಯು ದೇಶದಲ್ಲಿ ಭಯವನ್ನು ಹರಡುತ್ತಿದ್ದು,  ಜೊತೆಗೆ ಈ ಭಯವನ್ನು ದ್ವೇ#ಷವನ್ನಾಗಿ ಪರಿವರ್ತಿಸುತ್ತಾರೆ. ಕಾಂಗ್ರೆಸ್ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. 

ಶನಿವಾರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ದೆಹಲಿ ಪ್ರವೇಶಿಸುತ್ತಿದ್ದಂತೆ ದೆಹಲಿ ಗಡಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿ, 'ಬಿಜೆಪಿಯವರು ದ್ವೇಷವನ್ನು ಹರಡುತ್ತಾರೆ, ನಾವು ಪ್ರೀತಿಯನ್ನು ಹರಡುತ್ತೇವೆ ಹಾಗು ಎಲ್ಲಾ ಭಾರತೀಯರನ್ನು ಅಪ್ಪಿಕೊಳ್ಳುತ್ತೇವೆ' ಎಂದಿದ್ದಾರೆ. 

ನಮ್ಮ ಈ ಭಾರತ್ ಜೋಡೋ ಯಾತ್ರೆಯಲ್ಲಿ ಹಿಂದೂಸ್ತಾನ ಹಾಗು 'ಮೊಹಬ್ಬತ್' (ಪ್ರೀತಿ) ಇದೆ. ಅದು ಯಾವುದೇ ಜಾತಿ, ಪಂಥ, ಧರ್ಮ, ಶ್ರೀಮಂತ ಅಥವಾ ಬಡವರನ್ನು ನೋಡುವುದಿಲ್ಲ ಮತ್ತು ಎಲ್ಲರನ್ನೂ ಪರಸ್ಪರ ಒಟ್ಟಿಗೆ ಅಪ್ಪಿಕೊಳ್ಳುತ್ತದೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ದೇಶದಲ್ಲಿ RSS ಅಥವಾ ಬಿಜೆಪಿಯ ಎಲ್ಲಾ ನೀತಿಗಳು ಜನರಲ್ಲಿ ಭಯ, ಆ#ತಂಕವನ್ನು ಹರಡುವುದಾಗಿದೆ. ದೇಶದ ಪ್ರತಿಯೊಬ್ಬರೂ ಭಯವನ್ನು ಹೊಂದಿರಬೇಕೆಂದು ಅವರು ಬಯಸುತ್ತಾರೆ ಹಾಗು ಅವರು ಈ 'ಡರ್' ಅನ್ನು 'ನಫ್ರತ್' (ಭಯವನ್ನು ದ್ವೇ#ಷವನ್ನಾಗಿ) ಪರಿವರ್ತಿಸುತ್ತಾರೆ. ಇಲ್ಲಿ ‘ಡರ್’ ಇಲ್ಲದಿದ್ದರೆ ಅದು ‘ನಫ್ರತ್’ ಆಗಿ ಪರಿವರ್ತನೆಯಾಗುವುದಿಲ್ಲ. ನಾವು ‘ಡರೋ ಮತ್’ ಎನ್ನುತ್ತೇವೆ, ಜೊತೆಗೆ ನಾವು ಪ್ರೀತಿಯನ್ನು ಹರಡಿದ್ದೇವೆ ಎಂದು ಅವರು ಹೇಳಿದರು.

ದೇಶದಲ್ಲಿ ಬಿಜೆಪಿ/ಆರ್‌ಎಸ್‌ಎಸ್ ದ್ವೇ#ಷವನ್ನು ಹರಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ. ನಾವು ಪ್ರೀತಿಯ ಮೂಲಕ ಜನರನ್ನು ಒಗ್ಗೂಡಿಸುವ ಭಾರತಕ್ಕೆ ವಿಭಿನ್ನ ಮಾರ್ಗವನ್ನು ತೋರಿಸುವ ಗುರಿಯನ್ನು ಈ ನಮ್ಮ ಯಾತ್ರೆ ಹೊಂದಿದೆ ಎಂದರು.

Ads on article

Advertise in articles 1

advertising articles 2

Advertise under the article