ಪಿರಿಯಾಪಟ್ಟಣದ ಸೆಂಟ್ ಮೇರಿಸ್ ಚರ್ಚ್ ಮೇಲೆ ದಾ#ಳಿ; ಏಸುವಿನ ಮೂರ್ತಿ, ತೊಟ್ಟಿಲು ಧ್ವಂ#ಸಗೈದ ದು#ಷ್ಕರ್ಮಿಗಳು
Wednesday, December 28, 2022
ಮೈಸೂರು(Headlines Kannada): ಕ್ರಿಶ್ಚಿಯನ್ನರ ಕ್ರಿಸ್ಮಸ್ ಮುಗಿಯುತ್ತಿದ್ದಂತೆಯೇ ಪಿರಿಯಾಪಟ್ಟಣದ ಸೆಂಟ್ ಮೇರಿಸ್ ಚರ್ಚ್ ಮೇಲೆ ದು#ಷ್ಕರ್ಮಿಗಳು ದಾ#ಳಿ ಮಾಡಿದ್ದಾರೆ.
ಸೆಂಟ್ ಮೇರಿಸ್ ಚರ್ಚಿನ ಒಳಗೆ ನು#ಗ್ಗಿದ ದು#ಷ್ಕರ್ಮಿಗಳು, ಬಾಲ ಏಸುವಿನ ಮೂರ್ತಿ ಹಾಗೂ ತೊಟ್ಟಿಲನ್ನು ಒ#ಡೆದು ಹಾಕಿದ್ದಾರೆ. ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಚರ್ಚ್ ಒಳಗಿನ ಟೇಬಲ್ ಮೇಲೆ ಬುಟ್ಟಿಯಲ್ಲಿನ, ತೊಟ್ಟಿಲಲ್ಲಿ ಬಾಲ ಏಸು ಅನ್ನು ಮಲಗಿಸಲಾಗಿತ್ತು. ಚರ್ಚ್ನಲ್ಲಿ ಯಾರು ಇಲ್ಲದ ವೇಳೆ ದು#ಷ್ಕರ್ಮಿಗಳು ದಾ#ಳಿ ಮಾಡಿ, ಬಾಲ ಏಸುವಿನ ಮೂರ್ತಿಯನ್ನ ಪು#ಡಿ ಪು#ಡಿ ಮಾಡಿದ್ದಾರೆ. ಹಾಗೇ ಚರ್ಚ್ ಹೊರಗೆ ಇದ್ದ ಹುಂಡಿ ಕೂಡ ಕ#ಳ್ಳತನವಾಗಿದೆ. ಚರ್ಚ್ನ ಫಾದರ್ ಜಾನ್ ಪೌಲ್ ಮೈಸೂರಿಗೆ ತೆರಳಿದ ವೇಳೆಯಲ್ಲಿ ದು#ಷ್ಕರ್ಮಿಗಳು ಈ ದಾ#ಳಿ ಮಾಡಿದ್ದಾರೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.