
ಮಂಗಳೂರಿನಲ್ಲಿ ಜಲೀಲ್ ಹ#ತ್ಯೆ ಖಂಡಿಸಿ ಬೃಹತ್ ಹಕ್ಕೊತ್ತಾಯ ಸಭೆ; ಹ#ತ್ಯೆಯಾದವರ ಕುಟುಂಬಕ್ಕೆ ಪರಿಹಾರ, ಹಂತಕರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯ
ಮಂಗಳೂರು(Headlines Kannada): ಕೃಷ್ಣಾಪುರದಲ್ಲಿ ನಡೆದ ಜಲೀಲ್ ಹ#ತ್ಯೆ, ಅ#ನೈತಿಕ ಪೊಲೀಸ್#ಗಿರಿ, ಮ#ತೀಯ ಗೂಂ#ಡಾಗಿರಿಯನ್ನು ಖಂಡಿಸಿ ಕೊ#ಲೆಯಾದವರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ಮುಸ್ಲಿಂ ಜಮಾಅತ್, SYS-SSF ಆಶ್ರಯದಲ್ಲಿ ಮಂಗಳೂರು ಮಿನಿ ವಿಧಾನಸೌಧದ ಮುಂದೆ ಬಳಿ ಪ್ರತಿಭಟನೆ ಬೃಹತ್ ಹಕ್ಕೊತ್ತಾಯ ಪ್ರ#ತಿಭಟನೆ ಆಯೋಜಿಸಲಾಗಿತ್ತು.
ಹಂ#ತಕರ ವಿರುದ್ಧ ಜಾಮೀನು ಸಿಗದಂತಹ ಕಠಿಣ ಸೆ#ಕ್ಷನ್ ವಿಧಿಸಲು ಆಗ್ರಹ
ಹಂ#ತಕರಿಂದ ಕೊ#ಲೆಯಾದ ಫಾಝಿಲ್, ಜಲೀಲ್ ಮನೆಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಬೇಕು, ಹ#ತ್ಯೆಯಾದ ಜಲೀಲ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು, ಕೊ#ಲೆ ಪ್ರಕರಣದ ಹಿಂದಿರುವ ನಿಜವಾದ ಆರೋಪಿಗಳನ್ನು ಬಂಧಿಸಬೇಕು ಹಾಗು ಅವರ ವಿರುದ್ಧ ಜಾಮೀನು ಸಿಗದಂತಹ ಕಠಿಣ ಸೆ#ಕ್ಷನ್ ವಿಧಿಸಬೇಕು, ಅ#ಪರಾಧ ಕೃ#ತ್ಯ ಎಸಗಿದ ಆರೋಪಿಗಳು ರಾಜಾರೋಷವಾಗಿ ತಿರುಗಾಡದಂತೆ ಕ್ರಮಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಹಕ್ಕೊತ್ತಾಯಾದ ವೇಳೆ ಮುಂದಿಡಲಾಯಿತು.
ಹಂ#ತಕರ ವಿರುದ್ಧ ಜೀ#ವಾವಧಿ ಶಿ#ಕ್ಷೆ ವಿಧಿಸಿ
ಬೃಹತ್ ಹಕ್ಕೊತ್ತಾಯ ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ, ದ.ಕ.ಜಿಲ್ಲೆಯಲ್ಲಿ ಗೂಂ#ಡಾಗಳ ವರ್ತನೆಯಿಂದ ಜನ ಬೇಸತ್ತು ಹೋಗಿದ್ದಾರೆ. ವಿನಾ ಕಾರಣ ಒಂದು ಸಮುದಾಯವನ್ನು ಗುರಿ ಮಾಡಿಕೊಂಡು ಹ#ತ್ಯೆ ನಡೆಯುತ್ತಿದೆ. ಹ#ತ್ಯೆ ನಡೆಸಿದವರ ಬಂಧನ ಆದ ವೇಗದಲ್ಲಿಯೇ ಅವರ ಬಿಡುಗಡೆ ಕೂಡ ಆಗಿತ್ತಿದೆ. ಹಂ#ತಕರು ಹೊರ ಬರುತ್ತಿದ್ದಂತೆ ಇನ್ನೊಂದು ಹ#ತ್ಯೆಗೆ ಮುಂದಾಗುತ್ತಾರೆ. ಇದನ್ನು ತಡೆಗಟ್ಟಲು ಪೊಲೀಸರು ಹಂ#ತಕರ ವಿರುದ್ಧ ಜೀ#ವಾವಧಿ ಶಿ#ಕ್ಷೆ ವಿಧಿಸಬಹುದಾದಂಥ ಕಾಯ್ದೆಗಳನ್ನು ಹಾಕುವಂತೆ ಅವರು ಒತ್ತಾಯಿಸಿದರು.
ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತೇವೆ: ಕಮಿಷನರ್ ಶಶಿಕುಮಾರ್
ಹಕ್ಕೊತ್ತಾಯದ ವೇದಿಕೆಗೆ ಬಂದ ಮಂಗಳೂರು ಕಮಿಷನರ್ ಶಶಿಕುಮಾರ್, ಜಲೀಲ್ ಹ#ತ್ಯೆ ಪ್ರಕರಣವನ್ನು ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತೇವೆ. ಸಾರ್ವಜನಿಕರು ಯಾವುದೇ ರೀತಿಯಲ್ಲಿಯೂ ಕಾನೂನು ಮೀರದೆ, ಶಾಂತಿಯಿಂದಿರಬೇಕು ಎಂದು ಮನವಿ ಮಾಡಿದರು.
ಕೊ#ಲೆಗೀಡಾದ ಜಲೀಲ್ ಸಹೋದರ ಮುಹಮ್ಮದ್ ಮುಸ್ಲಿಯಾರ್, ಹಿರಿಯ ವಿದ್ವಾಂಸ ಹಾಗೂ ಸುನ್ನೀ ಮುಖಂಡ ಯಾಕೂಬ್ ಸಅದಿ ನಾವೂರು, ಎಸೆಸ್ಸೆಫ್ ಮುಖಂಡ ಮುಹಮ್ಮದ್ ನವಾಝ್ ಸಖಾಫಿ ಅಡ್ಯಾರ್ ಪದವು, ಎಸ್‌ವೈಎಸ್ ಮುಖಂಡ ಸಿಎಚ್ ಮುಹಮ್ಮದಲಿ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಅತ್ ಮುಖಂಡ ಅಶ್ರಫ್ ಕಿನಾರ, ಎಸೆಸ್ಸೆಫ್ ರಾಷ್ಟ್ರೀಯ ನಾಯಕ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜೈ, ಎಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ, ಎಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಟ್ ಸುಫ್ಯಾನ್ ಸಖಾಫಿ, ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಬಶೀರ್ ಮದನಿ ಕೂಳೂರು, ಸಿರಾಜುದ್ದೀನ್ ಸಖಾಫಿ ಕನ್ಯಾನ ಮಾತನಾಡಿದರು.
ಇನಾಯತ್ ಅಲಿ, ಮೊಯ್ದಿನ್ ಬಾವಾ, ರಿಯಾಝ್ ಫರಂಗಿಪೇಟೆ ಸೇರಿದಂತೆ ಹಲವರು ಹಕ್ಕೊತ್ತಾಯದಲ್ಲಿ ಭಾಗಿ...
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮಾಜಿ ಶಾಸಕ ಮೊಯ್ದಿನ್ ಬಾವಾ, ಎಸ್’ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಬಿಎಂ ಮಮ್ತಾಜ್ ಅಲಿ, ಸುಹೈಲ್ ಕಂದಕ್, ಅಶ್ರಫ್ ಸಅದಿ ಮಲ್ಲೂರು, ಸಾದಿಕ್ ಮಾಸ್ಟರ್ ಮಲೆಬೆಟ್ಟು, ಅಬ್ದುಲ್ ಜಲೀಲ್ ಬ್ರೈಟ್, ನೇಜಾರ್ ಹಾಜಿ, ಇಕ್ಬಾಲ್ ಕೃಷ್ಣಾಪುರ, ಮುಹಮ್ಮದ್ ಹನೀಫ್ ಬಜಪೆ, ಇಸ್ಮಾಯೀಲ್ ಕೆಸಿ ರೋಡ್, ಎಕೆ ಹಸೈನಾರ್ ಸಕಲೇಶಪುರ, ವೆನ್ಝ್ ಅಬ್ದುಲ್ಲ, ಮುಸ್ತಫಾ ನಯೀಮಿ, ಇಸ್ಮಾಯೀಲ್ ಮಾಸ್ಟರ್, ಫಾರೂಕ್ ಸಖಾಫಿ, ಅಶ್ರಫ್ ಕಲ್ಲೇಗ ಮತ್ತಿತರರು ಭಾಗವಹಿಸಿದ್ದರು.
ಹಕ್ಕೊತ್ತಾಯದ ಕೊನೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್, SYS, SSF ಮುಖಂಡರು ಮಂಗಳೂರು ಪೊಲೀಸ್ ಆಯುಕ್ತರ ಮೂಲಕ ಮುಖ್ಯಮಂತ್ರಿ, ರಾಜ್ಯಪಾಲ ಹಾಗು ಕರ್ನಾಟಕ ಪೊಲೀಸ್ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರು.