ಈ ಬಾರಿಯ ಚುನಾವಣೆಯಲ್ಲಿ ಹಿಂದುತ್ವದ ವಿಚಾರಧಾರೆ ಹೊಂದಿರುವ 25 ಜನರಿಗೆ BJP ಟಿಕೆಟ್ ನೀಡಬೇಕು: ಪ್ರಮೋದ್ ಮುತಾಲಿಕ್ ಒತ್ತಾಯ
Tuesday, December 6, 2022
ಹೊಸಪೇಟೆ(Headlines Kannada): ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಿಂದುತ್ವದ ವಿಚಾರಧಾರೆ ಹೊಂದಿರುವ 25 ಜನರಿಗೆ BJP ಟಿಕೆಟ್ ಕೊಡಬೇಕೆಂದು BJP ವರಿಷ್ಠರಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, BJP ಯಾರ ಅಪ್ಪನದು ಅಲ್ಲ, ನಮ್ಮ ಪರಿಶ್ರಮದ ಫಲದಿಂದ BJP ಈಗ ಅಧಿಕಾರದಲ್ಲಿದೆ ಎಂದರು.
BJPಯಲ್ಲಿ ಟಿಕೆಟ್ ಕೇಳುವುದು ನಮ್ಮ ಹಕ್ಕು. ನಾನು ಕೂಡ ಈ ಬಾರಿ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವೆ. ನಾಲ್ಕೈದು ಕ್ಷೇತ್ರಗಳಲ್ಲಿ ಈಗಾಗಲೇ ಸರ್ವೇ ನಡೆಯುತ್ತಿದೆ. ಜೇವರ್ಗಿಯ ಸಿದ್ಧಲಿಂಗ ಸ್ವಾಮೀಜಿ, ಧಾರವಾಡದ ಪರಮಾತ್ಮ ಸ್ವಾಮೀಜಿ ಅವರು ಚುನಾವಣೆಗೆ ಈ ಬಾರಿ ಸ್ಪರ್ಧಿಸಲಿದ್ದಾರೆ. ಹಿಂದುತ್ವವಾದಿಗಳಿಗೆ ಬಿಜೆಪಿ ಟಿಕೆಟ್ ಕೊಡದಿದ್ದರೆ ಸ್ವಂತ ಬಲದ ಮೇಲೆ ಈ ಬಾರಿ ಚುನಾವಣೆಗೆ ನಿಲ್ಲುತ್ತೇವೆ ಎಂದು ಹೇಳಿದರು.