ಮತ್ತೆ 'ಕೈ' ಹಿಡಿಯಲಿದ್ದಾರೆಯೇ ವಿಶ್ವನಾಥ್! ಪುಷ್ಟಿ ನೀಡಿದ ಮಲ್ಲಿಕಾರ್ಜುನ ಖರ್ಗೆಯ ಭೇಟಿ
ನವದೆಹಲಿ (Headlines Kannada): ಬಿಜೆಪಿಯಲ್ಲಿದ್ದರೂ ಇಲ್ಲದಂತಿರುವ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮತ್ತೆ ಕೈ ಹಿಡಿಯಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಪುಷ್ಟಿ ನೀಡಿದ್ದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿರುವುದು.
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ 3 ವರ್ಷದ ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿ ಕಾಂಗ್ರೆಸ್ – ಜೆಡಿಎಸ್ ಸರ್ಕಾರ ಪತನವಾಗಲು ಪ್ರಮುಖ ಕಾರಣರಾಗಿದ್ದರು. ಕಾಂಗ್ರೆಸಿನಿಂದ ಹೊರಹೋದ ಬಾಂಬೆ ಟೀಂಗೆ ವಿಶ್ವನಾಥ್ ಅವರೇ ನಾಯಕರಾಗಿದ್ದರು.. ಆದರೆ ಉಪಚುನಾವಣೆಯಲ್ಲಿ ಸೋತ ಬಳಿಕ ಅವರು ಕ್ಯಾಪ್ಟನ್‍ಶಿಪ್ ಕಳೆದುಕೊಂಡು ಇಡೀ ಬಾಂಬೆ ಟೀಂ ಪಾಲಿಗೆ ಅಪ್ರಸ್ತುತರೆನ್ನಿಸಿಕೊಂಡಿದ್ದರು. ಇದರಿಂದ ವಿಶ್ವನಾಥ್ ಬಿಜೆಪಿ ವಿರುದ್ಧ ಒಂದಲ್ಲ ಒಂದು ರೀತಿಯಲ್ಲಿ ಠಕ್ಕರ್ ನೀಡುತ್ತಲೇ ಬಂದಿದ್ದಾರೆ.
ಈ ಮಧ್ಯೆ ಎಚ್. ವಿಶ್ವನಾಥ್ ದಿಢೀರನೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಕೈಗೆ ಒಂದು ಹೂಗುಚ್ಛ ನೀಡಿ ಶುಭ ಹಾರೈಸಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.