ಕೃಷ್ಣಾಪುರದಲ್ಲಿ ಹ#ತ್ಯೆ#ಗೀಡಾದ ಜಲೀಲ್; ಆರೋಪಿಗಳನ್ನು ಕೂಡಲೇ ಬಂಧಿಸುವಂತೆ  ಪಟ್ಟು ಹಿಡಿದ ಆಕ್ರೋಶಿತರು; ಮೃ#ತ#ದೇಹ ಮುಂದಿಟ್ಟು ಧರಣಿ

ಕೃಷ್ಣಾಪುರದಲ್ಲಿ ಹ#ತ್ಯೆ#ಗೀಡಾದ ಜಲೀಲ್; ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪಟ್ಟು ಹಿಡಿದ ಆಕ್ರೋಶಿತರು; ಮೃ#ತ#ದೇಹ ಮುಂದಿಟ್ಟು ಧರಣಿ

ಸುರತ್ಕಲ್ (Headlines Kannada): ನಿನ್ನೆ ರಾತ್ರಿ ದು#ಷ್ಕರ್ಮಿಗಳಿಂದ ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿ ಹ#ತ್ಯೆ#ಗೀಡಾದ ಅಬ್ದುಲ್ ಜಲೀಲ್ ಅವರ ಮೃ##ದೇಹ ಕೃಷ್ಣಾಪುರದ ಸ್ವಗೃಹಕ್ಕೆ ತೆಗೆದುಕೊಂಡು ಬಂದ ವೇಳೆ ಆರೋಪಿಗಳ ಬಂಧನಕ್ಕಾಗಿ ಮೃ##ದೇಹವನ್ನಿಟ್ಟು ಸೇರಿದ್ದ ಜನರು ಜನ ಧರಣಿ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ನಿನ್ನೆ ರಾತ್ರಿ ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದು#ಷ್ಕರ್ಮಿಗಳು ಕೃಷ್ಣಾಪುರ 9ನೇ ಬ್ಲಾಕ್ ನಿವಾಸಿ ಅಬ್ದುಲ್ ಜಲೀಲ್ ಅವರನ್ನು ಚಾ#ಕು#ವಿನಿಂದ ಇ#ರಿದು ಹ#ತ್ಯೆ ಮಾಡಿ ಪರಾರಿಯಾಗಿದ್ದರು.

ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮ#ರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃ#ತ#ದೇಹವನ್ನು ಕೃಷ್ಣಾಪುರ 9ನೇ ಬ್ಲಾಕ್'ನಲ್ಲಿರುವ ಅವರ ಸ್ವಗೃಹಕ್ಕೆ ತೆಗೆದುಕೊಂಡು ಬರಲಾಯಿತು. ಅಂತಿಮ ವಿಧಿವಿಧಾನದ ಬಳಿಕ ಇಲ್ಲಿನ 9ನೇ ಬ್ಲಾಕ್ ಮಸೀದಿಯಲ್ಲಿ ಮ#ಯ್ಯತ್ ನಮಾಝ್ ನಿರ್ವಹಿಸಲಾಯಿತು. ಮೃ#ತದೇಹವನ್ನು ಅಂ#ತಸಂಸ್ಕಾರಕ್ಕೆ ಕೊಂಡೊಯ್ಯಲು ಮುಂದಾಗುತ್ತಿದ್ದಂತೆ ಜಮಾಯಿಸಿದ್ದ ಜನ ಸಮೂಹ ಆರೋಪಿಗಳನ್ನು ಬಂಧಿಸದೇ ಮೃ#ತದೇಹವನ್ನು ಅಂ#ತ್ಯಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ನಡೆಸಿದರು.

ಪೋಲೀಸರ ವೈಫಲ್ಯದಿಂದಲೇ ಈ ಭಾಗದಲ್ಲಿ ಹ#ತ್ಯೆ ನಡೆಯುತ್ತಿದ್ದು, ಸರಕಾರ ಕೂಡ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ, ಇಂಥ ಹ#ತ್ಯೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಈವತ್ತು ಇಂಥ ಹ#ತ್ಯೆಗಳು ಮರುಕಳಿಸುತ್ತಿರಲಿಲ್ಲ. ಯಾವುದೇ ಒತ್ತಡಕ್ಕೆ ಮಣಿಯದೆ ಕೂಡಲೇ ಆರೋಪಿಗಳನ್ನು ಬಂಧಿಸವಂತೆ ಧರಣಿನಿರತರು ಪಟ್ಟು ಹಿಡಿದರು. 

ಈ ವೇಳೆ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಮಾಜಿ ಶಾಸಕ ಮೊಯ್ದಿನ್ ಬಾವಾ, ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ, ಮಾಜಿ ಮೇಯರ್ ಅಶ್ರಫ್ ಮತ್ತಿತರ ಮುಖಂಡರು ಆಗಮಿಸಿದ್ದು, ಆಕ್ರೋಶಿತ ಜನರನ್ನು ಸಮಾಧಾನಪಡಿಸಲು ಮುಂದಾದರು. ಆದರೆ ಆಕ್ರೋಶಿತ ಜನ ತಮ್ಮ ಪಟ್ಟು ಸಡಿಲಿಸಲಿಲ್ಲ. ಇಂಥ ಹ#ತ್ಯೆ ಇನ್ನೆಷ್ಟು ಕಾಣಬೇಕು ಎಂದು ಕಿಡಿಕಾರಿದ ಜನ, ಪೋಲೀಸರ ವೈಫಲ್ಯದತ್ತ ಬೊಟ್ಟು ಮಾಡಿ ತೋರಿಸಿದರು. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಪಟ್ಟು ಹಿಡಿದ ಜನರನ್ನು ಸಮಾಧಾನಪಡಿಸಲಾಯಿತು.

ಈ ಎಲ್ಲ ಘಟನೆಯ ಬಳಿಕೆ ಜಲೀಲ್ ಮೃ#ತದೇಹವನ್ನು ಕೂಳೂರು ಪಂಜಿಮೊಗೆರು ಜುಮ್ಮಾ ಮಸೀದಿಯಲ್ಲಿ ಅಂ#ತ್ಯಸಂಸ್ಕಾರ ನಡೆಸಲು ಕೊಂಡೊಯ್ಯಲಾಯಿತು.  

Ads on article

Advertise in articles 1

advertising articles 2

Advertise under the article