ಜಲೀಲ್ ಹ#ತ್ಯೆ ಪ್ರಕರಣ; ಧರಣಿನಿರತರಿಗೆ ಪೊಲೀಸ್ ಕಮೀಷನರ್ ಶಶಿಕುಮಾರ್ ಕೊಟ್ಟ ಭರವಸೆ ಏನೂ..?

ಜಲೀಲ್ ಹ#ತ್ಯೆ ಪ್ರಕರಣ; ಧರಣಿನಿರತರಿಗೆ ಪೊಲೀಸ್ ಕಮೀಷನರ್ ಶಶಿಕುಮಾರ್ ಕೊಟ್ಟ ಭರವಸೆ ಏನೂ..?

ಸುರತ್ಕಲ್ (Headlines Kannada): ಶನಿವಾರ ರಾತ್ರಿ ದು#ಷ್ಕರ್ಮಿಗಳಿಂದ ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿ ಹ#ತ್ಯೆ#ಗೀಡಾದ ಅಬ್ದುಲ್ ಜಲೀಲ್ ಪ್ರಕಾರವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಭರವಸೆ ನೀಡಿದ್ದಾರೆ.

ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿ ತಮ್ಮ ಅಂಗಡಿಯಲ್ಲಿದ್ದ ವೇಳೆ ದ್ವಿಚಕ್ರದಲ್ಲಿ ಬಂದ  ಇಬ್ಬರು ದು#ಷ್ಕರ್ಮಿಗಳು ಅಬ್ದುಲ್ ಜಲೀಲ್ ಅವರನ್ನು ಚಾ#ಕುವಿನಿಂದ ಇ#ರಿದು ಹ#ತ್ಯೆ ಮಾಡಿ ಪರಾರಿಯಾಗಿದ್ದರು.

ಅವರ ಮೃ#ತದೇಹವನ್ನು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮ#ರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕೃಷ್ಣಾಪುರ 9ನೇ ಬ್ಲಾಕ್'ನಲ್ಲಿರುವ ಅವರ ಸ್ವಗೃಹಕ್ಕೆ ತೆಗೆದುಕೊಂಡು ಬಂದ ವೇಳೆ ಅಲ್ಲಿ ಸೇರಿದ್ದ ಜನ ಆರೋಪಿಗಳ ಬಂಧನಕ್ಕೆ ಬಿಗಿಪಟ್ಟು ಹಿಡಿದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಈ ವೇಳೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಸೇರಿದಂತೆ ಹಲವರು ಸಮಾಧಾನ ಪಡಿಸಲು ಮುಂದಾದರು.

ಈ ವೇಳೆ ಧರಣಿನಿರತರನ್ನು ಸಮಾಧಾನ ಪಡಿಸಲು ಮುಂದಾದ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರ ವಿರುದ್ಧ ಆಕ್ರೋಶಿತರು, 'ಇಂಥ ಹ#ತ್ಯೆ ಇನ್ನೆಷ್ಟು ಕಾಣಬೇಕು, ಕಾನೂನಿನ ಸಡಿಲಿಕೆಯಿಂದಲೇ ಹ#ತ್ಯೆ ಮಾಡಿದವರು ಕೆಲವೇ ದಿನಗಳಲ್ಲಿ ಹೊರಬರುತ್ತಿದ್ದಾರೆ. ಫಾಝಿಲ್ ಹ#ತ್ಯೆ ನಡೆಸಿದವರನ್ನು ಪೊಲೀಸರು ಬಂಧಿಸಿದ್ದರು. ಆದರೆ ಅವರು ಬಂಧನದ ಕೆಲವೇ ದಿನಗಳಲ್ಲಿ ಹೊರಬಂದು ರಾಜಾರೋಷವಾಗಿ ಮೆರೆಯುತ್ತಿದ್ದಾರೆ. ಪೊಲೀಸರು ಹ#ತ್ಯೆಯನ್ನು ಗಂ#ಭೀರವಾಗಿ ತೆಗೆದುಕೊಳ್ಳದ ಕಾರಣದಿಂದಲೇ ಇಂಥ ಹ#ತ್ಯೆ ಇಲ್ಲಿ ಮರುಕಳಿಸುತ್ತಿದೆ' ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು. 

ಇದನ್ನೆಲ್ಲಾ ಶಾಂತವಾಗಿ ಕೇಳಿದ ಪೊಲೀಸ್ ಕಮೀಷನರ್ ಶಶಿಕುಮಾರ್, ಹ#ತ್ಯೆಯ ಆರೋಪಿಗಳನ್ನು ಆದಷ್ಟು ಶೀಘ್ರದಲ್ಲಿ ಬಂಧಿಸುತ್ತೇವೆ. ನಾನು ಈ ಹ#ತ್ಯೆಯನ್ನು ಗಂ#ಭೀರವಾಗಿ ತೆಗೆದುಕೊಂಡಿದ್ದು, ಇಲ್ಲಿಯೇ ಇದ್ದು ಆರೋಪಿಗಳನ್ನು ಬಂಧಿಸುತ್ತೇನೆ. ನೀವು ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಲು ಮುಂದಾಗಬೇಡಿ, ಎಲ್ಲರೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಹಕಾರ ನೀಡಬೇಕು. ಈಗಾಗಲೇ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ, ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದರು. 

ಪೊಲೀಸ್ ಕಮೀಷನರ್ ಶಶಿಕುಮಾರ್ ಅವರ ಮಾತಿನಂತೆ ಧರಣಿಯಿಂದ ಹಿಂದೆ ಸರಿದ ಜನ, ಕೊನೆಗೆ ಪಾ#ರ್ಥೀವ ಶ#ರೀರವನ್ನು ಕೂಳೂರು ಪಂಜಿಮೊಗೆರು ಜುಮ್ಮಾ ಮಸೀದಿಯಲ್ಲಿ ಅಂ#ತ್ಯಸಂಸ್ಕಾರ ನಡೆಸಿದರು.

Ads on article

Advertise in articles 1

advertising articles 2

Advertise under the article