
ಕಾರ್ಕಳ ತೆಳ್ಳಾರುವಿನಲ್ಲಿ ಕೈಗೆ ಆದ ಗಾಯದಿಂದ ಮ#ನನೊಂದ ವ್ಯಕ್ತಿ ನೇ#ಣಿಗೆ ಶ#ರಣು
Thursday, December 22, 2022
ಕಾರ್ಕಳ (Headlines Kannada): ಕೈಗೆ ಆದ ಗಾಯದಿಂದ ಮನನೊಂದ ವ್ಯಕ್ತಿಯೋರ್ವರು ಮರಕ್ಕೆ ನೇ#ಣುಬಿ#ಗಿದುಕೊಂಡು ಆ#ತ್ಮ#ಹ#ತ್ಯೆ ಮಾಡಿಕೊಂಡ ಘಟನೆ ಕಾರ್ಕಳ ದುರ್ಗಾ ಗ್ರಾಮದ ತೆಳ್ಳಾರು ಎಂಬಲ್ಲಿ ಗುರುವಾರ ಬೆಳಿಗ್ಗೆ 11.30ಕ್ಕೆ ನಡೆದಿದೆ.
ತೆಳ್ಳಾರು ನಿವಾಸಿ 65 ವರ್ಷದ ವಿಠಲ ಪೂಜಾರಿ ಆ#ತ್ಮ#ಹ#ತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ಸುಮಾರು 30 ವರ್ಷಗಳಿಂದ ವಿಪರೀತ ಮ#ದ್ಯ ಸೇವಿಸುವ ಅಭ್ಯಾಸ ಹೊಂದಿದ್ದರು. ಎರಡು ದಿನಗಳ ಹಿಂದೆ ಎಡ ಕೈಗೆ ಕತ್ತಿ ತಾಗಿ ಗಾಯವಾಗಿದ್ದು, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು. ಇಂದು ಬೆಳಿಗ್ಗೆ ತೆಳ್ಳಾರುವಿನ ಜಲದುರ್ಗಾ ದೇವಸ್ಥಾನದ ಹತ್ತಿರ ದೆಕ್ಕಾಜೆ ಚಡವಿನ ರಸ್ತೆಯ ಬದಿಯ ಗೇರು ಮರದ ಕೊಂಬೆಗೆ ನೇ#ಣು ಬಿಗಿ#ದುಕೊಂಡು ಆ#ತ್ಮ#ಹ#ತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.