ಸೌದಿ ಅರೇಬಿಯಾದ ಭಾರತೀಯ ನೂತನ ರಾಯಭಾರಿಯಾಗಿ ಸುಹೇಲ್ ಎಜಾಸ್ ಖಾನ್ ನೇಮಕ
ಸುಹೇಲ್ ಎಜಾಸ್ ಖಾನ್ ಅವರು ಮುಂದೆ ತೆರವಾಗಲಿರುವ ರಾಯಭಾರಿ ಹುದ್ದೆಗೆ ನಿಯುಕ್ತಿಗೊಳ್ಳಲಿದ್ದಾರೆ. ಈಗ ತಾತ್ಕಾಲಿಕ ಹುದ್ದೆಯಲ್ಲಿ ಎನ್. ರಾಮ್ ಪ್ರಸಾದ್ ಕಾರ್ಯ ನಿರ್ವಹಿಸುತ್ತಿದ್ದಾರೆ.
2005 ರಿಂದ 2008ರ ತನಕ ಜಿದ್ದಾ ರಾಯಭಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ ನಂತರ ಡೆಪ್ಯೂಟಿ ಚೀಫ್ ಆಫ್ ಮಿಷನ್ ಆಗಿ ಕಾರ್ಯನಿರ್ವಹಿದ ನಂತರ ರಿಯಾದ್'ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ರಾಯಭಾರಿ ಡಾ.ಔಸಫ್ ಸಯೀದ್ ಪೂರ್ವ ವಲಯ ಕಾರ್ಯದರ್ಶಿಯಾಗಿ ಬಡ್ತಿ ಪಡೆದು ದೆಹಲಿಯ ಸಚಿವಾಲಯಕ್ಕೆ ವರ್ಗಾವಣೆಗೊಂಡ ನಂತರ ಈ ಹುದ್ದೆ ಖಾಲಿಯಾಗಿದ್ದು, ಈಗ ನೂತನ ರಾಯಭಾರಿಯಾಗಿ ಸುಹೇಲ್ ಎಜಾಸ್ ಖಾನ್ ನಿಯುಕ್ತಿಗೊಂಡಿದ್ದಾರೆ.
ಖಾನ್ ರವರು 1997ರ ಐಎಫ್ಎಸ್ ಅಧಿಕಾರಿಯಾಗಿದ್ದು ಮಧ್ಯಪ್ರದೇಶದ ಇಂದೋರ್'ನ ಮೆಡಿಕಲ್ ಕಾಲೇಜಿನಿಂದ MBBS ಮಾಡಿರುತ್ತಾರೆ. ತನ್ನ ಸೇವೆಯನ್ನು ಈಜಿಪ್ಟಿನಲ್ಲಿ ಆರಂಭಿಸಿದ್ದರು.
ಸ್ವಾಗತ...ಶುಭ ಹಾರೈಕೆ:
ಭಾರತೀಯ ವಲಸಿಗರು, ಅನಿವಾಸಿ ಭಾರತೀಯರು, ಹಾಗೆಯೇ ಕರ್ನಾಟಕ ಅನಿವಾಸಿ ಭಾರತೀಯರು (KNRI), ರಿಯಾದಿನಲ್ಲಿರುವ ಪಡುಬಿದ್ರೆ ಮೂಲದ ನ್ಯಾಯವಾದಿ, ಸಮಾಜ ಸೇವಕ, ಡಾ.ಎಪಿಜೆ ಅಬ್ದುಲ್ ಕಲಾಂ ಶಾಂತಿ ಪ್ರಶಸ್ತಿ ಪುರಸ್ಕೃತ ಡಾ. ಪಿ.ಎ.ಹಮೀದ್ ಪಡುಬಿದ್ರಿ ಅವರು ಸುಹೇಲ್ ಎಜಾಸ್ ಖಾನ್ ಅವರನ್ನು ಕೆಎಸ್‌ಎಗೆ ಭಾರತದ ಗೌರವಾನ್ವಿತ ನೂತನ ರಾಯಭಾರಿಯಾಗಿ ನೇಮಿಸಿರುವುದಕ್ಕೆ ಸ್ವಾಗತಿಸುವ ಜೊತೆಗೆ ಶುಭ ಹಾರೈಸಿದ್ದಾರೆ.