ಪ್ರವಾಸಕ್ಕೆಂದು ಕರೆದೊಯ್ದು ವಿದ್ಯಾರ್ಥಿನಿಗೆ ಆಹಾರದಲ್ಲಿ ಮಾ#ದಕ ವಸ್ತುವನ್ನು ಬೆರೆಸಿ ಅ#ತ್ಯಾ#ಚಾರ ಎಸಗಿದ ಪ್ರಾಶುಪಾಲ ! ಉತ್ತರ ಪ್ರದೇಶದಲ್ಲೊಂದು ಪೈ#ಶಾಚಿಕ ಕೃ#ತ್ಯ ಬಯಲಿಗೆ
ಮೀರತ್(Headlines Kannada): ಉತ್ತರ ಪ್ರದೇಶ ಒಂದಲ್ಲ ಒಂದು ಅಪರಾಧ ಸುದ್ದಿಗಳಿಗಾಗಿ ಸುದ್ದಿಯಲ್ಲಿರುವ ಮಧ್ಯೆ ನಾಚಿಕೆಗೇಡಿನ ಮತ್ತೊಂದು ಘಟನೆಯೊಂದು ನಡೆದಿದೆ.
ಪ್ರವಾಸಕ್ಕೆಂದು ಕರೆದುಕೊಂಡು ಹೋದ ಕಾಲೇಜು ಪ್ರಿನ್ಸಿಪಾಲ್ 11ನೇ ತರಗತಿಯ ವಿದ್ಯಾರ್ಥಿನಿಗೆ ಆಹಾರದಲ್ಲಿ ಮಾ#ದಕ ವಸ್ತುವನ್ನು ಬೆರೆಸಿ ಅ#ತ್ಯಾ#ಚಾರ ಎಸಗಿದ್ದಾರೆ ಎಂದು ದೂರಲಾಗಿದೆ.
ನವೆಂಬರ್ 23ರಂದು ಪ್ರಾಂಶುಪಾಲರು ಕಾಲೇಜಿನ 9 ವಿದ್ಯಾರ್ಥಿಗಳನ್ನು ವೃಂದಾವನಕ್ಕೆ ಪ್ರವಾಸಕ್ಕೆ ಕರೆದೊಯ್ದಿದ್ದರು. ವಿದ್ಯಾರ್ಥಿನಿಯರಿಗೆ ವಸತಿಗಾಗಿ ಹೋಟೆಲ್‌ನಲ್ಲಿ 2 ಕೊಠಡಿಗಳನ್ನು ತೆಗೆದುಕೊಂಡಿದ್ದರು. 1 ಕೊಠಡಿಯಲ್ಲಿ 8 ವಿದ್ಯಾರ್ಥಿಗಳು ಉಳಿದುಕೊಂಡಿದ್ದರೆ, ಇನ್ನೊಂದು ಕೊಠಡಿಯಲ್ಲಿ ಪ್ರಾಂಶುಪಾಲರು 11ನೇ ತರಗತಿ ವಿದ್ಯಾರ್ಥಿನಿ(17 ವರ್ಷದ ಬಾಲಕಿ) ಉಳಿದುಕೊಂಡಿದ್ದರು ಎಂದು ಹೇಳಲಾಗಿದೆ.
ಈ ವೇಳೆ ಪ್ರಾಂಶುಪಾಲರು ವಿದ್ಯಾರ್ಥಿನಿಯೊಬ್ಬಳೇ ಇದ್ದ ವೇಳೆ ಆಹಾರದಲ್ಲಿ ಮಾ#ದಕ ವಸ್ತುವನ್ನು ಬೆರೆಸಿ ಅ#ತ್ಯಾ#ಚಾರ ಎಸಗಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿ ಪ್ರತಿ#ರೋಧ ವ್ಯಕ್ತಪಡಿಸಿದಾಗ, ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವ ಬೆದರಿಕೆ ಹಾಕಿದ್ದು ಜೊತೆಗೆ ಕೊ#ಲೆ ಮಾಡುವುದಾಗಿಯೂ ಬೆದ#ರಿಕೆ ಹಾಕಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳು ನವೆಂಬರ್ 24ರಂದು ತನ್ನ ಮನೆಗೆ ಮರಳಿದ್ದು, ಮೊದಲು ಬಾಲಕಿ ಘಟನೆಯ ಬಗ್ಗೆ ಮೌನವಾಗಿದ್ದು, ನಂತರ ಘಟನೆ ನಡೆದ ಕುರಿತು ತನ್ನ ಕುಟುಂಬ ಸದಸ್ಯರಿಗೆ ವಿವರಿಸಿದ್ದಾಳೆ ಎನ್ನಲಾಗಿದೆ.
ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪ್ರಾಂಶುಪಾಲರ ವಿರುದ್ಧ ಶನಿವಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ವೇಳೆ ಕಾಲೇಜು ಪ್ರಾಂಶುಪಾಲರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.