
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವತಿಯ ಬಂಧನ; ಈಕೆ ಭಾರತಕ್ಕೆ ಬಂದಿದ್ದೇಕೆ..?
Monday, January 23, 2023
ಬೆಂಗಳೂರು: ಪಾಕಿಸ್ತಾನದಿಂದ ಬಂದು ಉತ್ತರಪ್ರದೇಶದ ನಿವಾಸಿ ಮುಲಾಯಂ ಸಿಂಗ್ ಜೊತೆ ಮದುವೆ ಆಗಿ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಇಕ್ರಾ ಜೀವನಿ(19) ಎಂಬ ಯುವತಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಮುಲಾಯಂ ಸಿಂಗ್ ಜೊತೆ ಮದುವೆ ಆಗಿದ್ದ ಇಕ್ರಾ, ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ಪತಿ ಜೊತೆ ಅಕ್ರಮವಾಗಿ ನೆಲೆಸಿದ್ದರು. ಬೆಳ್ಳಂದೂರು ಪೊಲೀಸರು ಪಾಕ್ ಮಹಿಳೆ ಇಕ್ರಾ ಜೀವನಿ, ಮುಲಾಯಂ ಸಿಂಗ್ ಇಬ್ಬರನ್ನೂ ಬಂಧಿಸಿದ್ದಾರೆ.
ಗೇಮ್ ಆ್ಯಪ್ ಲೂಡೊ ಆಟದ ಮುಖಾಂತರ ಇಕ್ರಾ ಹಾಗೂ ಮುಲಾಯಂ ಪರಸ್ಪರ ಪರಿಚಯವಾಗಿ, ಬಳಿಕ ಪ್ರೀತಿ ಶುರುವಾಗಿ ಇಕ್ರಾ ನೇಪಾಳದ ಮೂಲಕ ಭಾರತ ಗಡಿ ಪ್ರವೇಶಿಸಿದ್ದಳು ಎಂದು ಹೇಳಲಾಗಿದೆ.
ವಿಚಾರಣೆ ವೇಳೆ ಇಕ್ರಾ ತನ್ನ ಹೆಸರನ್ನು ರಾವಾ ಯಾದವ್ ಎಂದು ಹೆಸರು ಬದಲಿಸಿ ಪಾಸ್ಪೋರ್ಟ್ಗೆ ಅರ್ಜಿ ಹಾಕಿರುವ ವಿಷಯ ಬಹಿರಂಗವಾಗಿದೆ ಎನ್ನಲಾಗಿದೆ.