
ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಸಾಧ್ಯವಾಗದಂಥ ಭರವಸೆ ನೀಡುತ್ತಿದ್ದಾರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮೈಸೂರು(Headlines Kannada): ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜಕೀಯ ನಿವೃತ್ತಿ ಪಡೆಯುವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಇದ್ದಾರೆ, ಈ ಕಾರಣದಿಂದಲೇ ಇತ್ತೀಚೆಗೆ ಸಾಧ್ಯವಾಗದಂಥ ಭರವಸೆ ನೀಡುತ್ತಿದ್ದಾರೆ. ಸೋಲಿನ ಭೀತಿ ಅವರಿಗೆ ಅವರಿಸಿದೆ. ಹೀಗಾಗಿ ಕೇವಲ ಮತ ಗಳಿಸಲು ಜನರಿಗೆ ಇಲ್ಲಸಲ್ಲದ ಭರವಸೆ ನೀಡುತ್ತಿದ್ದಾರೆ ಎಂದಿದ್ದಾರೆ.
ಮೈಸೂರಿನ ಸುತ್ತೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಇತ್ತೀಚಿಗೆ ತಮ್ಮ ಎದುರಾಳಿಗಳ ವಿರುದ್ಧ ವೈಯಕ್ತಿಕ ಟೀಕೆಗೆ ಇಳಿದಿದ್ದಾರೆ. ಇದರ ಬಗ್ಗೆ ಯೋಚಿಸಲಿ. ನಾವು ಸಿದ್ದರಾಮಯ್ಯರ ಕಾಲದ ಭ್ರಷ್ಟಾಚಾರ, ದುರಾಡಳಿತವನ್ನಷ್ಟೇ ಟೀಕಿಸಿದ್ದೇವೆ. ಅವರ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡಿಲ್ಲ ಎಂದರು.
ಸೋಲಿನ ಚಿಂತೆಯಲಿರುವ ಕಾಂಗ್ರೆಸ್ ನವರು ಅಸಾಧ್ಯವಾದ ಭರವಸೆ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಆಡಳಿತದಲ್ಲಿ ವಿದ್ಯುತ್ ಇಲಾಖೆ ಸಂಕಷ್ಟದಲ್ಲಿತ್ತು. ಬಿಜೆಪಿ ಸರಕಾರ ಬಂದ ಮೇಲೆ ಅದು ಸುಧಾರಿಸಿದೆ ಎಂದರು.