ಉಡುಪಿ: ಬೀಡಿನಗುಡ್ಡೆಯಲ್ಲಿ ಎರಡು ಹೆಬ್ಬಾವುಗಳ ಸೆರೆ: ನಿಟ್ಟುಸಿರು ಬಿಟ್ಟ ಸ್ಥಳೀಯರು
Monday, January 9, 2023
ಉಡುಪಿ(Headlines Kannada): ಇಲ್ಲಿನ ಬೀಡಿನಗುಡ್ಡೆ ಬಳಿಯ ಮೈದಾನದಲ್ಲಿ ಎರಡು ಹೆಬ್ಬಾವುಗಳನ್ನು ಸೆ#ರೆ ಹಿಡಿಯಲಾಗಿದೆ.
ಬೀಡಿನಗುಡ್ಡೆಯ ವಲಸೆ ಕಾರ್ಮಿಕರ ಕಾಲೊನಿಯ ಬಳಿಯ ಗಿಡಗಂಟೆಗಳು ಬೆಳೆದಿರುವ ಸ್ಥಳದಲ್ಲಿ ಹೆಬ್ಬಾವಿನ ವಾಸಸ್ಥಳವಾಗಿದ್ದು, ಒಂದೇ ಕಡೆ ನಾಲ್ಕು ಹೆಬ್ಬಾವು ಕಂಡುಬಂದಿವೆ. ಇದರಿಂದ ಬಹಳಷ್ಟು ಆ#ತಂಕದ ವಾತಾವರಣ ಸೃಷ್ಟಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಉರಗ ತಜ್ಞ ಯು. ಬಿ. ನಾಗರಾಜ ರಾವ್ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಎರಡು ಹೆಬ್ಬಾವವನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಸುಮಾರು 10ರಿಂದ 12 ಅಡಿ ಉದ್ದದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ., ಹೆಬ್ಬಾವು ರಕ್ಷಣಾ ಕಾರ್ಯದಲ್ಲಿ ಸಮಾಜಸೇವಕರಾದ ನಿತ್ಯಾನಂದ ಒಳಕಾಡು ಸಹಕರಿಸಿದರು.