ಜ.12ರಂದು ಜಿಲ್ಲೆಯಾದ್ಯಂತ 1.60 ಲಕ್ಷ ಶಾಲಾ ಮಕ್ಕಳಿಂದ ಏಕಕಾಲದಲ್ಲಿ ಸ್ವಚ್ಛತಾ-ಜಾಗೃತಿ ಅಭಿಯಾನ ಕಾರ್ಯಕ್ರಮ: ಅಂಡಾರು ದೇವಿಪ್ರಸಾದ್ ಶೆಟ್ಟಿ

ಜ.12ರಂದು ಜಿಲ್ಲೆಯಾದ್ಯಂತ 1.60 ಲಕ್ಷ ಶಾಲಾ ಮಕ್ಕಳಿಂದ ಏಕಕಾಲದಲ್ಲಿ ಸ್ವಚ್ಛತಾ-ಜಾಗೃತಿ ಅಭಿಯಾನ ಕಾರ್ಯಕ್ರಮ: ಅಂಡಾರು ದೇವಿಪ್ರಸಾದ್ ಶೆಟ್ಟಿ

ಉಡುಪಿ(Headlines Kannada): ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಭಾರತ ಸೇವಾದಳ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ರಜತೋತ್ಸವ ಸಮಿತಿಯ ಸಹಯೋಗದೊಂದಿಗೆ ಜಿಲ್ಲೆಯ 1096 ಸರಕಾರಿ ಅನುದಾನಿತ ಮತ್ತು ಖಾಸಗಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸುಮಾರು 1.60 ಲಕ್ಷ ಶಾಲಾ ಮಕ್ಕಳಿಂದ ಏಕಕಾಲದಲ್ಲಿ ಆಯಾಯ ಶಾಲೆಗಳ ಅಕ್ಕಪಕ್ಕದ ವಠಾರದಲ್ಲಿ ಸ್ವಚ್ಛತಾ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತ ಸೇವಾದಳದ ಉಡುಪಿ ಜಿಲ್ಲಾ ಸಮಿತಿ‌ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಹೇಳಿದರು. 

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9ಗಂಟೆಗೆ ಚಿಟ್ಪಾಡಿಯ ದೇವಾಡಿಗರ ಸಭಾ ಭವನದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಸುಮಾರು 500 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ .ಈ ಕಾರ್ಯಕ್ರಮದಲ್ಲಿ ತ್ಯಾಜ್ಯದ ಬಗ್ಗೆ ಮಕ್ಕಳಿಗೆ ಮಾಹಿತಿ, ನಿರ್ವಹಣೆ ಮತ್ತು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡಲಾಗುವುದು ಎಂದರು. 

ಸುದ್ದಿಗೋಷ್ಠಿಯಲ್ಲಿ ಭಾರತ ಸೇವಾಳದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ತಿಮ್ಮಪ್ಪ ಶೆಟ್ಟಿ ಆರೂರು, ಜಿಲ್ಲಾ ಸಂಘಟಕ ಫಕ್ಕಿರಗೌಡ ಹಳೇಮನಿ, ಪುಂಡಲೀಕ ಮರಾಠೆ ಇದ್ದರು.

Ads on article

Advertise in articles 1

advertising articles 2

Advertise under the article