ಸಿಡ್ನಿಯಲ್ಲಿ ಉಡುಪಿ ಪುತ್ತಿಗೆ ಶ್ರೀಗಳಿಗೆ ಸಂಭ್ರಮದ ಗುರುವಂದನೆ
Saturday, January 7, 2023
ಸಿಡ್ನಿ(Headlines Kannada): ಪರ್ಯಾಯ ವಿಶ್ವ ಸಂಚಾರದ ನಿಮಿತ್ತ ಸಿಡ್ನಿ ಮಹಾನಗರಕ್ಕೆ ಆಗಮಿಸಿದ ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರಿಗೆ ಭಕ್ತರು ಭಕ್ತಿಗೌರವಭಾವಗಳೊಂದಿಗೆ ಹೆಲೇನ್ಸ್ ಬರ್ಗಿನ ಪ್ರಸಿದ್ಧ ಶ್ರೀನಿವಾಸ ದೇಗುಲದದಲ್ಲಿ ತುಲಾಭಾರವನ್ನು ನೆರವೇರಿಸಿದರು.
ಇದಕ್ಕೂ ಮೊದಲು ಶ್ರೀಪಾದರನ್ನು ಸಾಲಂಕೃತ ಕುದುರೆ ಜಟಕಾ ಬಂಡಿಯಲ್ಲಿ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆತರಲಾಯಿತು. ಈ ಸಂದರ್ಭದಲ್ಲಿ ಸಂಸ್ಥಾನ ಪೂಜೆ ,ಮುದ್ರಾಧಾರಣೆ , ಪಾದಪೂಜೆ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಮುಂತಾದ ಕಾರ್ಯಕ್ರಮಗಳು ನಡೆದವು.
ಶ್ರೀಧರ ಕುಂಶಿ ಸ್ವಾಗತಿಸಿದರು. ಜಗನ್ನಾಥ್ ಶ್ರೀಗಳ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.