ಕನ್ನಡ ಭಾಷೆಗೆ ಸರಕಾರ ಏನು ಕೊಡುಗೆ ನೀಡಿದೆ?: ಬಿಜೆಪಿ ಡಬಲ್ ಇಂಜಿನ್ ಸರಕಾರದ ವಿರುದ್ಧ ಕಿ#ಡಿಕಾರಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ
ಹಾವೇರಿ(Headlines Kannada): ರಾಜ್ಯ ಹಾಗು ಕೇಂದ್ರ ಬಿಜೆಪಿ ಡಬಲ್ ಇಂಜಿನ್ ಸರಕಾರದ ವಿರುದ್ಧ ಕಿ#ಡಿಕಾರಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ, ಕನ್ನಡ ಭಾಷೆಯ ರಕ್ಷಣೆ ಮತ್ತು ಬೆಳವಣಿಗೆಗೆ ನೀಡಿರುವ ಕೊಡುಗೆಯನ್ನು ಪ್ರಶ್ನಿಸಿದ್ದಾರೆ.
86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣ ವೇಳೆ ಮಾತನಾಡಿರುವ ಅವರು, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಕೇವಲ ಕಣ್ಣೊರೆಸುವ ತಂತ್ರವಾಗಿದ್ದು, ಭಾಷೆಯ ಅಭಿವೃದ್ಧಿ ಮತ್ತು ಸಂಶೋಧನೆಗೆ ಏನೂ ಮಾಡಿಲ್ಲ ಎಂದರು.
ಇತರೆ ಶಾಸ್ತ್ರೀಯ ಭಾಷೆಗಳಿಗೆ ನೀಡಿರುವ ಕೇಂದ್ರದ ಅನುದಾನವನ್ನು ಹೋಲಿಸಿದರೆ, ಕನ್ನಡಕ್ಕೆ 42 ಕೋಟಿ ರೂಪಾಯಿಗಳ ಬೇಡಿಕೆಗೆ ಇಡಲಾಗಿತ್ತು, ಅದರಲ್ಲಿ ಕೇವಲ 3 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡಿದೆ. ಇದೇ ಅವಧಿಯಲ್ಲಿ ನಮ್ಮ ನೆರೆಯ ತಮಿಳು ಭಾಷೆಗೆ 23 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಕಳೆದ 5 ವರ್ಷಗಳಲ್ಲಿ ಕನ್ನಡ ಭಾಷೆಗೆ ಸುಮಾರು 5 ಕೋಟಿ ರೂಪಾಯಿ ಬಂದಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಗ್ರಾಮೀಣ ಭಾಗದ ಜನರು ತಮ್ಮ ಮಾತೃಭಾಷೆಯಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಹೋದಾಗ ಸಿಬ್ಬಂದಿಗಳು ಸಹಾಯ ಮಾಡಲು ನಿರಾಕರಿಸುತ್ತಿದ್ದಾರೆ. ಹೀಗಿರುವಾಗ ಕರ್ನಾಟಕದಲ್ಲಿ ಇಂತಹ ಬ್ಯಾಂಕ್‌ಗಳು ಏಕೆ ಇರಬೇಕು ಎಂದು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.