8ನೇ ಕ್ಲಾಸಿನ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದು, ಮದುವೆಯಾಗುವ ಆಸೆ ವ್ಯಕ್ತಪಡಿಸಿದ 47ರ ಶಿಕ್ಷಕ!

8ನೇ ಕ್ಲಾಸಿನ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದು, ಮದುವೆಯಾಗುವ ಆಸೆ ವ್ಯಕ್ತಪಡಿಸಿದ 47ರ ಶಿಕ್ಷಕ!ಕಾನ್ಪುರ: ಉತ್ತರ ಪ್ರದೇಶದ ಬಲ್ಲಾರ್ಪುರದ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ತನ್ನ ಮಗಳ ಸಮಾನದ ಎಂಟನೇ ತರಗತಿ ಬಾಲಕಿಗೆ ಪ್ರೇಮ ಪತ್ರ ಬರೆದು, ಮದ್ವೆಯಾಗುವ ಆಸೆ ವ್ಯಕ್ತಪಡಿಸಿದ್ದಾನೆ. ಈಗ ಈತನನ್ನು ವೃತ್ತಿಯಿಂದ ಅಮಾನತು ಮಾಡಿದ್ದು, ಎಫ್‌ಐಆರ್ ದಾಖಲಿಸಲಾಗಿದೆ.

13 ವರ್ಷದ ಬಾಲಕಿಯ ತಂದೆ ಶುಕ್ರವಾರ ನೀಡಿದ ದೂರಿನ ಅನ್ವಯ 47  ವರ್ಷ ವಯಸ್ಸಿನ  ಶಿಕ್ಷಕ ಹರಿ ಓಂ ಸಿಂಗ್ ವಿರುದ್ಧ FIR ದಾಖಲಿಸಲಾಗಿದೆ ಎಂದು ಕುನ್ವಾರ್ ಎಸ್‌ಪಿ ಅನುಪಮ್ ಸಿಂಗ್ ತಿಳಿಸಿದ್ದಾರೆ.

ಡಿಸೆಂಬರ್ 30ರಂದು ಮೊದಲು ಪತ್ರವನ್ನು ನೀಡಿದ್ದು, ಇದೀಗ ಆ ಪ್ರೇಮ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಶಿಕ್ಷಕನು ತಾನು ವಿದ್ಯಾರ್ಥಿಯನ್ನು ಮದುವೆಯಾಗುವುದಾಗಿ ಹೇಳಿದ್ದು, ಅವಳನ್ನು ತುಂಬಾ ಪ್ರೀತಿಸುತ್ತಿದ್ದೇನೆ, ರಜೆಯ ಸಮಯದಲ್ಲಿ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಪ್ರೇಮ ಪತ್ರದಲ್ಲಿ ಬರೆದಿದ್ದಾನೆ. 

ಇದನೆಲ್ಲ ಅರಿತ ವಿದ್ಯಾರ್ಥಿನಿಯ ಪೋಷಕರು ಸದರ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಕಿ#ರುಕುಳ ಮತ್ತು ಬೆದರಿಕೆ ದೂರು ದಾಖಲಿಸಿದ್ದಾರೆ. ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕನೌಜ್ ಎಸ್ಪಿ ಕುನ್ವರ್ ಅನುಪಮ್ ಸಿಂಗ್, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಹಾಗು ರಾಜ್ಯ ಶಿಕ್ಷಣ ಇಲಾಖೆಯು ವಿಚಾರಣೆ ನಡೆಸಿ ವರದಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲು ಕೇಳಲಾಗಿದೆ ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article