
ನಾಳೆ ತೆರೆಗೆ ಅಪ್ಪಳಿಸಲಿದೆ ಶಾರುಖ್ ಖಾನ್ ಅಭಿನಯದ ‘ಪಠಾಣ್’; ಬಿಡುಗಡೆಗೂ ಮುನ್ನವೇ ದಾಖಲೆ ಬರೆಯಲು ಸಿದ್ಧತೆ
Tuesday, January 24, 2023
ಮುಂಬೈ: ಶಾರುಖ್ ಖಾನ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ‘ಪಠಾಣ್’ ಸಿನಿಮಾ ನಾಳೆ (ಜನವರಿ 25) ರಿಲೀಸ್ಗೆ ಆಗಲಿದ್ದು, ಹಲವು ದಾಖಲೆ ಬರೆಯಲು ರೆಡಿ ಆಗಿದೆ.
ಶಾರುಖ್ ಖಾನ್ ಅವರು 4 ವರ್ಷಗಳ ಬಳಿಕ ದೊಡ್ಡ ಪರದೆಗೆ ಮರಳುತ್ತಿರುವುದರಿಂದ ಈ ಸಿನೆಮಾ ಬಗ್ಗೆ ದೊಡ್ಡ ನಿರೀಕ್ಷೆ ಇಡಲಾಗಿದೆ. ಅಡ್ವಾನ್ಸ್ ಬುಕಿಂಗ್ನಲ್ಲಿ ‘ಕೆಜಿಎಫ್ 2’ ಸಿನಿಮಾ ದಾಖಲೆಯನ್ನು ‘ಪಠಾಣ್’ ಮುರಿಯುವತ್ತ ಸಾಗಿದೆ.
‘ಪಠಾಣ್’ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದ್ದು, ಶಾರುಖ್ ಖಾನ್ ಅವರು ಈ ಚಿತ್ರದಿಂದ ದೊಡ್ಡ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಅಡ್ವಾನ್ಸ್ ಬುಕಿಂಗ್ ಸಾಕ್ಷಿಯಾಗಿ ನಿಂತಿದ್ದು, ಇಲ್ಲಿಯವರೆಗೆ ಬರೋಬ್ಬರಿ 4.10 ಲಕ್ಷ ಟಿಕೆಟ್ಗಳು ಮಲ್ಟಿಪ್ಲೆಕ್ಸ್ನಲ್ಲಿ ಭರ್ಜರಿಯಾಗಿ ಮಾರಾಟ ಆಗಿವೆ. ಇಂದು ರಾತ್ರಿ ವೇಳೆಗೆ ಈ ಸಂಖ್ಯೆ 5.25 ಲಕ್ಷ ದಾಟುವ ಸೂಚನೆ ಕಾಣುತ್ತಿದ್ದು, ಇದು ‘ಪಠಾಣ್’ ಮತ್ತೊಂದು ದಾಖಲೆಯನ್ನು ಸೃಷ್ಟಿಸಲಿದೆ.