
ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೇಜಸ್ವಿ ಸೂರ್ಯ ತೆರೆದಿಲ್ಲ: ಅಣ್ಣಾಮಲೈ ಸಮರ್ಥನೆ
ಚಿಕ್ಕಮಗಳೂರು: ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೇ ತೆರೆದಿದ್ದು, ಬಳಿಕ ಕ್ಷಮೆ ಕೇಳಿದ್ದಾರೆ ಎಂದು ಬುಧವಾರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿಕೆಯೊಂದನ್ನು ನೀಡಿರುವ ಬೆನ್ನಲ್ಲೇ, ಇದೀಗ ತೇಜಸ್ವಿ ಸೂರ್ಯ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರಿದಿಲ್ಲ, ಕ್ಷಮೆಯೂ ಯಾಚಿಸಿಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅಣ್ಣಾಮಲೈ, ಇಂಡಿಗೋ ವಿಮಾನದ ಎಟಿಆರ್ -72 ಸಣ್ಣ ವಿಮಾನದಲ್ಲಿ ತುರ್ತು ನಿರ್ಗಮನ ದ್ವಾರದ ಬದಿಯ ಸೀಟಿನಲ್ಲಿ ಸಂಸದ ತೇಜಸ್ವಿ ಸೂರ್ಯ ಕುಳಿತಿದ್ದರು. ಅವರು ಮಾತನಾಡುವಾಗ ಕೈ ಆಕ್ಸ್ಮಿಕವಾಗಿ ಬಾಗಿಲಿಗೆ ತಗುಲಿದೆ. ತಕ್ಷಣವೇ ಗಗನಸಖಿಗೆ ವಿಷಯ ತಿಳಿಸಲಾಯಿತು. ಈ ವೇಳೆ ಪೈಲಟ್ ಬಂದು ಪರಿಶೀಲಿಸಿದರು. ತೇಜಸ್ವಿ ಸೂರ್ಯ ವಿಮಾನದಲ್ಲಿ ತುರ್ತು ನಿರ್ಗಮನ ಬಾಗಿಲು ಎಳೆದಿಲ್ಲ ಎಂದಿದ್ದಾರೆ.
ಘಟನೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ತಪ್ಪು ಮಾಡಿಲ್ಲ, ವಿಮಾನ 1 ಗಂಟೆ ತಡವಾಗಿದ್ದಕ್ಕೆ ಅವರು ಪ್ರಯಾಣಿಕರ ಕ್ಷಮೆಯಾಚಿಸಿದ್ದಾರೆ ಎಂದು ಅಣ್ಣಾಮಲೈ ಹೇಳಿದರು.