ಬೆಂಗಳೂರಿನಲ್ಲಿ 'ಗುಜರಿ ನೀತಿ' ಜಾರಿಗೆ ಮುಂದಾದ ರಾಜ್ಯ ಸರಕಾರ; ಯಾವೆಲ್ಲ ಹಳೆಯ ವಾಹನಗಳಿಗೆ ಬೀಳಲಿದೆ ಬ್ರೇಕ್: ಇಲ್ಲಿದೆ ಮಾಹಿತಿ....
ಬೆಂಗಳೂರು: ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಹೆಚ್ಚುತ್ತಿರುವ ಜೊತೆಗೆ ಮಾಲಿನ್ಯ ಕೂಡ ಹೆಚ್ಚುತ್ತಿದ್ದು, ಇದರಿಂದ ಮುಂದಿನ ದಿನದಲ್ಲಿ ಉಸಿರಾಡುವ ಗಾಳಿ ವಿಷಕಾರಿಯಾಗುವ ಭೀತಿಯಿದ್ದು, ಇದಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಗುಜರಿ ನೀತಿಯನ್ನು ಜಾರಿ ಮಾಡಲು ಮುಂದಾಗಿದೆ.
ಗುಜರಿ ನೀತಿಯನ್ನು ಜಾರಿ ಮಾಡುವ ಮೂಲಕ ಖಾಸಗಿ ಬಳಕೆ ವಾಹನಗಳಿಗೆ 20 ವರ್ಷ, ವಾಣಿಜ್ಯ ವಾಹನಗಳಿಗೆ 15 ವರ್ಷ ಮಿತಿ ಏರಲು ಸರಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗುಜರಿಗೆ ನೀತಿಗೆ ಅನುಮೋದನೆ ನೀಡಿದ್ದು, ಮುಂದಿನ ತಿಂಗಳೊಳಗೆ ಅನುಷ್ಠಾನಕ್ಕೆ ಪ್ಲಾನ್ ರೂಪಿಸಿದೆ ಎಂದು ಹೇಳಲಾಗಿದೆ.
ಬೆಂಗಳೂರು ಮಹಾನಗರ ಸೇರಿ ಇಡೀ ರಾಜ್ಯದಲ್ಲಿ 3 ಕೋಟಿ ವಾಹನಗಳು ನೋಂದಾಣಿ ಆಗಿವೆ. ಇದರಲ್ಲಿ 15 ಲಕ್ಷ ವಾಹನಗಳು 15 ವರ್ಷ ಮೇಲ್ಪಟ್ಟವು. ಇಲ್ಲಿ ಹಳೆಯ ವಾಹನಗಳು ಹೆಚ್ಚು ಹೊಗೆ ಬಿಡುವುದರಿಂದ ಪರಿಸರ ಹಾಳಾಗುವ ಜೊತೆಗೆ ಮಾಲಿನ್ಯ ಕೂಡ ಹೆಚ್ಚುತ್ತಿದೆ.
ವಾಣಿಜ್ಯ(ಕಮರ್ಷಿಯಲ್) ವಾಹನ 15 ವರ್ಷ ಮೇಲ್ಟಟ್ಟ, ಖಾಸಗಿ(ಪರ್ಸನಲ್) ವಾಹನ 20 ವರ್ಷ ಮೇಲ್ಪಟ್ಟವುಗಳನ್ನ ಬ್ಯಾನ್ ಮಾಡಲು ಸರಕಾರ ಸಿದ್ದತೆ ನಡೆಸಿದೆ. ಗುಜರಿ ನೀತಿ ಜಾರಿ ಬಂದರೆ ಮುಂದೆ ಲಕ್ಷಾಂತರ ಗುಜರಿ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ. ಮುಂದೆ 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನ, 20 ವರ್ಷ ಮೇಲ್ಟಟ್ಟ ಖಾಸಗಿ ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ನೀಡದಿರಲು ಗುಜರಿ ನೀತಿಯಲ್ಲಿ ಉಲ್ಲೇಖ ಮಾಡಲಾಗಿದೆ.