'ಕಟೀಲ್ ಹೇಳಿಕೆಯಿಂದ BJP ಅಜೆಂಡಾ, ಸಂಸ್ಕೃತಿ ಏನು ಎಂಬುದು ತೋರಿಸಿದೆ; ಪೋ#ಲಿ ಹುಡುಗರ ಥರ ಮಾತನಾಡುವವರನ್ನು ಮುಂದಿನ ಚುನಾವಣೆಯಲ್ಲಿ ಒ#ದ್ದು ಹೊರಗೆ ಹಾಕಿ': ಸಿ.ಎಂ.ಇಬ್ರಾಹಿಂ
ಬೆಂಗಳೂರು(Headlines Kannada): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಕಿಡಿಕಾರಿರುವ ಜೆಡಿಎಸ್ ರಾಜಾಧ್ಯಕ್ಷ ಸಿ.ಎಂ ಇಬ್ರಾಹಿಂ, ಬಿಜೆಪಿಯವರಿಗೆ ಲವ್ ಮಾಡಿ ಗೊತ್ತಿಲ್ಲ, ಲವ್ ಅಂದರೆ ಏನೂ ಅಂತನೇ ಗೊತ್ತಿಲ್ಲ. ರಾಜ್ಯಾಧ್ಯಕ್ಷನಾಗಿದ್ದು ಕೊಂಡು ನಳಿನ್ ಕುಮಾರ್ ಕಟೀಲ್ ಪೋ#ಲಿ ಹುಡುಗರ ಥರ ಮಾತಾಡಿದ್ದಾರೆ. ಜನ ಮುಂದಿನ ಚುನಾವಣೆಯಲ್ಲಿ ಇಂಥವರನ್ನ ಒ#ದ್ದು ಹೊರಗೆ ಹಾಕ್ಬೇಕು ಎಂದು ಹೇಳಿದ್ದಾರೆ.
ಬೆಂಗಳೂರಿನ ನಗರದ ಜೆ.ಪಿ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ರಸ್ತೆ ಮತ್ತು ಚರಂಡಿಯಂತಹ ಸಣ್ಣ ಸಮಸ್ಯೆಗಳ ಬಗ್ಗೆ ಮಾತನಾಡಬೇಡಿ, ಆದರೆ ಲವ್ ಜಿ#ಹಾದ್ ನಂತಹ ವಿಷಯಗಳ ಬಗ್ಗೆ ಮಾತನಾಡಿ’ ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಅಜೆಂಡಾ, ಸಂಸ್ಕೃತಿ ಏನು ಅಂತಾ ತೋರಿಸಿಕೊಂಡಿದ್ದಾರೆ ಎಂದರು.
BJPಯಲ್ಲಿ ಕೆಲವರಿಗೆ ಮದ್ವೆನೇ ಆಗಿಲ್ಲ, ಇನ್ನು ಲವ್ ಬಗ್ಗೆ ಏನು ಗೊತ್ತು? ಮೊದಲು ಯುಪಿ ಸಿಎಂಗೆ ಲವ್ ಮಾಡೋಕೆ ಹೇಳಿ, ಆಮೇಲೆ ಜಿ#ಹಾದ್ ಬಗ್ಗೆ ನೋಡಿ ಎಂದು ವ್ಯಂಗ್ಯವಾಡಿದ ಇಬ್ರಾಹಿಂ, ನಳಿನ್ ಕುಮಾರ್ ಕಟೀಲ್ ಪೋಲಿ ಹುಡುಗರ ಥರ ಮಾತಾಡಿದ್ದಾರೆ. ಇದನ್ನೆಲ್ಲಾ ನೋಡಿ ಮುಂದೆ ಬೆಳೆಯೋ ಮಕ್ಕಳಿಗೆ ರಾಜ್ಯಾಧ್ಯಕ್ಷರು ಯಾವ ರೀತಿ ಸಂದೇಶ ನೀಡಿದ್ದಾರೆ? ಏನು ಪಾಠ ಮಾಡ್ತಿದ್ದಾರೆ? ಅಂತಾ ಇದರಲ್ಲಿ ಗೊತ್ತಾಗ್ತಿದೆ. ಚುನಾವಣೆಯಲ್ಲಿ ಇಂಥವರನ್ನ ಜನರೇ ಒ#ದ್ದು ಹೊರಗೆ ಹಾಕ್ಬೇಕು ಎಂದು ಕರೆ ನೀಡಿದ್ದಾರೆ.