ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಛೀ#.. ಥೂ#... ಎಂದ ಸ್ವಪಕ್ಷದ ನಾಯಕ H.ವಿಶ್ವನಾಥ್! ಬಿಜೆಪಿ ರಾಜ್ಯಾಧ್ಯಕ್ಷನಿಗೆ ಹೇಳಿದ್ದು ಏನು..?

ಮಡಿಕೇರಿ(Headlines Kannada): ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ಈಗ ರಾಜ್ಯಾದ್ಯಂತ ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ನಾಯಕರು  ಬಿಜೆಪಿ ಮೇಲೆ ಮುಗಿಬಿದ್ದರೆ, ಇತ್ತ ಬಿಜೆಪಿ ನಾಯಕರಾದ H.ವಿಶ್ವನಾಥ್ ಕೂಡ ನಳಿನ್ ಕುಮಾರ್ ಕಟೀಲ್ ಅವರಿಗೆ  ಛೀ#.. ಥೂ#.. ಎಂದು ಹೇಳಿ ಅವರ ಹೇಳಿಕೆಯ ವಿರುದ್ಧ ಕಿಡಿಕಾರಿದ್ದಾರೆ.

ನಳಿನ್ ಕುಮಾರ್ ಕಟೀಲ್ ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ರಸ್ತೆ ಮತ್ತು ಚರಂಡಿಯಂತಹ ‘ಸಣ್ಣ ಸಮಸ್ಯೆಗಳ’ ಬಗ್ಗೆ ಮಾತನಾಡಬೇಡಿ, ಆದರೆ ‘ಲವ್ ಜಿ#ಹಾದ್’ನಂತಹ ದೊಡ್ಡ ವಿಷಯಗಳ ಬಗ್ಗೆ ಮಾತನಾಡಿ ಎಂದು ಹೇಳಿಕೆ ನೀಡಿರುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. 

ಮಡಿಕೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಒಂದು ರಾಜ್ಯ ಆಳುವ ಪಕ್ಷದ ಅಧ್ಯಕ್ಷ ಹೀಗೆ ಅರ್ಥವಿಲ್ಲದ ಮಾತುಗಳನ್ನಾಡಬಾರದು, ಛೀ#.. ಥೂ#.. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೆ ಇದು ಸಣ್ಣ ಪುಟ್ಟ ವಿಷಯವಾಗಿರಬಹುದು,  ಆದರೆ ಕೇರಿಯಲ್ಲಿ ಬದುಕುವವರ ಕಥೆ ಏನು? ಕೇರಿಯಲ್ಲಿ ಬದುಕುವಂತಹ ನಮಗೆ ನಮ್ಮ ಮೂಲಭೂತ ಸೌಲಭ್ಯವೇ ಮುಖ್ಯ. ನಮ್ಮ ಪಾ#ಯಿಖಾನೆ ಏನಾಯ್ತು? ನಮ್ಮ ಚರಂಡಿ, ರಸ್ತೆ, ಮನೆ ಏನಾಯ್ತು? ನಮ್ಮ ಕೇರಿ ನೀರೇನಾಯ್ತು? ಇದುವೇ ನಮ್ಮ ದಿನನಿತ್ಯದ  ಸಮಸ್ಯೆ. ಈ ಸಮಸ್ಯೆ ಪರಿಹರಿಸುವುದು ಬಿಟ್ಟು ಲವ್ ಜಿ#ಹಾದ್ ಹೆಸರಿನಲ್ಲಿ ನೀವು ಜನರನ್ನು ಹೇಗೆ ದಿಕ್ಕು ತಪ್ಪಿಸುತ್ತೀರಿ ನೋಡಿ ಎಂದು ನಳಿನ್ ವಿರುದ್ಧ ವಾಗ್ದಾಳಿ ನಡೆಸಿದರು. 

ನೀವೊಂದು ರಾಜ್ಯ ಆಳುವ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದುಕೊಂಡು ಹೀಗೆ ಅರ್ಥವಿಲ್ಲದ ಮಾತುಗಳನ್ನಾಡಬಾರದು. ಛೀ.. ಥೂ… ಎಂದು ವಿಶ್ವನಾಥ್ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.