ವಿವಿಧ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ಒಟ್ಟು 272 ಮಂದಿ ವಿದ್ಯಾರ್ಥಿಗಳಿಗೆ ವೈಟ್ ಸ್ಟೋನ್ ಚಾರಿಟೇಬಲ್ ಟ್ರಸ್ಟ್ ನಿಂದ ಒಟ್ಟು 41 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಿದ ಸಂಭ್ರಮ ಪುತ್ತೂರು ಕಮ್ಯುನಿಟಿ ಸೆಂಟರ್ ಮಾರ್ಗದರ್ಶನದಲ್ಲಿ, ಬಿ - ಹ್ಯೂಮನ್ ಸಹ ಯೋಗ ದೊಂದಿಗೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಇದು ಖಾಸಗಿ ಸಂಸ್ಥೆಯೊಂದು ನೀಡುವ ಅತ್ಯಂತ ಗರಿಷ್ಠ ಮೊತ್ತದ ವಿದ್ಯಾರ್ಥಿ ವೇತನ ಎಂದು ರಾಜ್ಯ ಮಟ್ಟದಲ್ಲೇ ದಾಖಲೆ ಸೃಷ್ಟಿಸಿದೆ.
ವೈಟ್ ಸ್ಟೋನ್ ಶರೀಫ್ ಹಾಜಿಯವರು ಶೈಕ್ಷಣಿಕ ರಂಗಕ್ಕೆ ನೀಡುತ್ತಾ ಬರುತ್ತಿರುವ ಅಮೋಘ ಕೊಡುಗೆಗಳು ಇಂದು ರಾಜ್ಯದಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.
ಪ್ರತಿಷ್ಠಿತ ಅನಿವಾಸಿ ಉದ್ಯಮ ಸಾಮ್ರಾಜ್ಯದ ಅಧಿಪತಿಯಾಗಿರುವ ವೈಟ್ ಸ್ಟೋನ್ ಶರೀಫ್ ಹಾಜಿಯವರ ಒಂದು ವಿಶಿಷ್ಠ ಸ್ವಭಾವವೆಂದರೆ ಕೊಟ್ಟ ಮಾತಿಗೆ ಯಾವತ್ತೂ ತಪ್ಪುವುದಿಲ್ಲ ಎಂಬುದು. ಯಾರಿಗೇ ಆಗಲಿ, ಏನೇ ಆಗಲಿ ಅವರು ಒಂದು ಮಾತು ಕೊಟ್ಟರೆಂದರೆ ಆ ಮಾತನ್ನು ಯಾವ ಕಾರಣಕ್ಕೂ ಬದಲಾಯಿಸದೆ ಅಚಲರಾಗಿ ಕೊಟ್ಟ ಮಾತನ್ನು ಪೂರೈಸಿಯೇ ಬಿಡುತ್ತಾರೆ ಎಂದು ಅವರ ಆಪ್ತವಲಯದವರು ಹೇಳುತ್ತಾರೆ. ಇದು ನನ್ನ ಮತ್ತು ಅವರ ಒಡನಾಟದಿಂದಲೂ ನಾನು ಕೂಡಾ ಅನುಭವಿಸಿರುವ ಒಂದು ಸತ್ಯ.
ಆರ್ಥಿಕ ಹಿನ್ನಡೆಯಿಂದಾಗಿ ಶಿಕ್ಷಣದಿಂದ ವಂಚಿತರಾಗುವ ಸಮುದಾಯದ ಮಕ್ಕಳಿಗೆ ವೃತ್ತಿಪರ ಶಿಕ್ಷಣ ದೊರೆತು ಅವರ ಭವಿಷ್ಯದ ಬದುಕು ಕಟ್ಟಿಕೊಳ್ಳುವಂತಹ ವ್ಯವಸ್ಥೆ ರೂಪಿಸುವುದು ಸಾಮಾನ್ಯ ಕೊಡುಗೆಯಲ್ಲ, ಮುಂದೆ ಆ ಮಕ್ಕಳು ಜೀವನದ ದಾರಿ ಕಂಡು ಕೊಂಡು ಹೆತ್ತವರಿಗೂ ಕುಟುಂಬಕ್ಕೂ ಆಸರೆಯಾಗುವ ಮೂಲಕ ಇತರರಿಗೂ ಮಾದರಿಯಾಗಲಿದ್ದಾರೆ.
-- ಡಿ.ಐ. ಅಬೂಕರ್ ಕೈರಂಗಳ
