
ಅಂತಾರಾಷ್ಟ್ರೀಯ ಮಟ್ಟದ ಭಾರತೀಯ ಫುಟ್ಬಾಲ್ ಆಟಗಾರ್ತಿ ಈಗ ಝೊಮ್ಯಾಟೋ ಡೆಲಿವರಿಗಾರ್ತಿ! ಈಕೆಯ ಪರಿಸ್ಥಿತಿ ಕಂಡು ಮರುಗಿದ ನೆಟ್ಟಿಗರು
ಮುಂಬೈ(Headlineskannada): ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಫುಟ್ಬಾಲ್ ಆಟಗಾರ್ತಿಯೊಬ್ಬಳು ಈಗ ಕುಟುಂಬ ನಿರ್ವಹಣೆಗೆ ಝೊಮ್ಯಾಟೋ ಡೆಲಿವರಿಗಾರ್ತಿಯಾಗಿ ಆಗಿ ಕೆಲಸ ಮಾಡುವ ಸ್ಥಿತಿಗೆ ಬಂದಿದ್ದು, ಈಕೆಯ ವೀಡಿಯೋವೊಂದು ವೈರಲ್ ಆಗಿದೆ.
ಫುಟ್ಬಾಲ್ ಆಟಗಾರ್ತಿಯ ಹೆಸರು ಪೊಲಾಮಿ ಅಧಿಕಾರಿ. ಇತ್ತೀಚಿಗೆ ಈಕೆ ಫುಡ್ ಡೆಲಿವರಿಗೆಂದು ಗ್ರಾಹಕರ ಮನೆಗೆ ಹೋದಾಗ ಇವಳ ಗುರುತು ಹಿಡಿದ ಕೊಲ್ಕೊತ್ತಾದ ಮಂದಿ ಇವರನ್ನು ಮಾತನಾಡಿಸಿದ್ದಾರೆ. ಈಕೆಯ ಹಿನ್ನೆಲೆಯನ್ನು ಕೇಳಿ ತಿಳಿದುಕೊಂಡು ವಿಡಿಯೋ ಮಾಡಿದ್ದಾರೆ. ಈಕೆಯನ್ನು ಹೇಗಾದರೂ ಮಾಡಿ ಮತ್ತೆ ಫುಟ್ಬಾಲ್ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಮಾಡಬೇಕು, ಅದಕ್ಕಾಗಿ ಆಸಕ್ತರು ಸಹಾಯ ಮಾಡುವಂತೆ ನೆಟ್ಟಿಗರು ಮನವಿ ಮಾಡಿದ್ದಾರೆ.
ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಪೊಲಾಮಿ, ಚಾರುಚಂದ್ರ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಫುಟ್ಬಾಲ್ನೆಡೆ ಆಕರ್ಷಿತರಾದರು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಮಟ್ಟಿಗೆ ಪೊಲಾಮಿ ಬೆಳೆದರು. ಪೊಲಾಮಿ ಅಕ್ಕ, ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಕೊರೊನಾ ಸ್ಥಿತ್ಯಂತರ ಮತ್ತು ಕೌಟುಂಬಿಕ ನಿರ್ವಹಣೆಯ ಜವಾಬ್ದಾರಿಯಿಂದಾಗಿ ಈಕೆ ಝೊಮ್ಯಾಟೋ ಕಂಪೆನಿಯನ್ನು ಸೇರಬೇಕಾಯಿತು. ದಿನವೊಂದಕ್ಕೆ ಪೊಲಾಮಿ ರೂ. 300-400 ಗಳಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಪೊಲಾಮಿ ಫುಟ್ಬಾಲ್ ಅಭ್ಯಾಸದಿಂದ ದೂರ ಸರಿದಿದ್ದಾರೆ.
ಈ ತಿಂಗಳ 10ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈಗಾಗಲೇ 57,000 ಮಂದಿ ಈ ವಿಡಿಯೋ ನೋಡಿದ್ದಾರೆ. 2,000ಕ್ಕಿಂತಲೂ ಹೆಚ್ಚು ಮಂದಿ ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಹಲವಾರು ಮಂದಿ ಕಾಮೆಂಟ್ ಕೂಡ ಮಾಡಿದ್ದು, ಹೇಗಾದರೂ ಈಕೆ ಮತ್ತೆ ತನ್ನ ಕ್ಷೇತ್ರಕ್ಕೆ ಮರಳಬೇಕು, ಅದಕ್ಕಾಗಿ ಬೆಂಬಲಿಸೋಣ ಎಂದಿದ್ದಾರೆ.