ಎಷ್ಟೇ ಬೇಡಿದರೂ ಸಿಗದ ರಜೆ; ತನ್ನ ಮಗುವಿನ ಶ#ವವನ್ನು SP ಕಚೇರಿಗೆ ಕೊಂಡೊಯ್ದ ಪೊಲೀಸ್ ಪೇದೆ!
ಲಕ್ನೋ: ಕಾಯಿಲೆ ಪೀಡಿತೆ ಪತ್ನಿ ಹಾಗು ಮಕ್ಕಳನ್ನು ನೋಡಿಕೊಳ್ಳಲು ರಜೆ ಕೊಡದ ಕಾರಣ ಪೊಲೀಸ್ ಪೇದೆಯೊಬ್ಬ ಸತ್ತ ತನ್ನ ಮಗುವಿನ ಶ#ವವನ್ನು ಹಿರಿಯ ಪೊಲೀಸ್ ಅಧೀಕ್ಷಕರ ಕಚೇರಿಗೆ ಕೊಂಡೊಯ್ದಿರುವ ಮನ ಕಲಕುವ ಘಟನೆ ಉತ್ತರ ಪ್ರದೇಶದ ಈತ್ವಾ ಜಿಲ್ಲೆಯಲ್ಲಿ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿ ಹಾಗು ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ತನಗೆ ಪೊಲೀಸ್ ಇಲಾಖೆಯಿಂದ ರಜೆ ನೀಡುತ್ತಿಲ್ಲ ಎಂದು ಪೊಲೀಸ್ ಪೇದೆ ಸೋನು ಚೌಧರಿ ಆರೋಪಿಸಿದ್ದಾರೆ.
ಕಳೆದ ವಾರ ಸೋನು ಚೌಧರಿ, ಇಟವಾ ನಗರ ಎಸ್ ಪಿ ಕಪಿಲ್ ದೇವ್ ಅವರ ಕಚೇರಿಗೆ ತೆರಳಿ ರಜೆ ಕೋರಿ ಅರ್ಜಿ ಸಲ್ಲಿಸದ್ದರು. ರಜೆ ಕೊಡದೆ ಅವರನ್ನು, ಕ್ವಿಕ್ ರೆಸ್ಪಾನ್ಸ್ ಟೀಮ್ ಗೆ ವರ್ಗಾಯಿಸಲಾಯಿತು. ಇದರಿಂದ ತಾನು ಹೆಚ್ಚಿನ ಸಮಯ ಕರ್ತವ್ಯದಲ್ಲಿಯೇ ಇರಬೇಕಾದ ಕಾರಣ ತನ್ನ ಮಗ ಸಾ#ವನ್ನಪ್ಪಿದ್ದಾನೆ ಎಂದು ಸೋನು ಚೌಧರಿ ಹೇಳಿದ್ದಾರೆ.
ಸೋನು ಪತ್ನಿ ಕವಿತಾ ಇತ್ತೀಚಿಗೆ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಹಾಸಿಗೆಯಲ್ಲೇ ದಿನದೂಡುತ್ತಿದ್ದಾರೆ. ಬುಧವಾರ ಸೋನು ಚೌಧರಿ ಕರ್ತವ್ಯಕ್ಕೆ ಹೋರಾಟಗಾ ಅವರ ಇಬ್ಬರು ಮಕ್ಕಳಾದ ಶಿವೇಂದ್ರ, ಹಾಗು ಗೋಲು, ಮನೆಯಿಂದ ಯಾರಿಗೆ ಹೇಳದೆ ಪಕ್ಕದ ಪ್ಲಾಟ್‌ಗೆ ಆಟವಾಡಲು ಹೋಗಿದ್ದರು. ಬಳಿಕ ಶಿವೇಂದ್ರ ವಾಪಸಾದರೂ ಗೋಲು ಮನೆಗೆ ಹಿಂದಿರುಗಿರಲಿಲ್ಲ. ಆತನಿಗೆ ಹುಡುಕಾಡಿದಾಗ ಪಕ್ಕದ ಪ್ಲಾಟ್‌ನಲ್ಲಿ ಚರಂಡಿ ನೀರಿನಿಂದ ತುಂಬಿದ ಗುಂಡಿಯಲ್ಲಿ ಆತನ ಶ#ವ ತೇಲುತ್ತಿರುವುದು ಕಂಡು ಬಂತು.
ತನ್ನ ಕುಟುಂಬವನ್ನು ನೋಡಿಕೊಳ್ಳಲು ಆಗದದಿರುವುದರಿಂದ ತನ್ನ ಮಗ ಸ#ತ್ತಿದ್ದಾನೆ ಎಂದು ಆರೋಪಿಸಿದ ಸೋನು, ಆಕ್ರೋಶಗೊಂಡು ತನ್ನ ಮಗನ ದೇಹವನ್ನು ಎಸ್‌ಎಸ್‌ಪಿ ಕಚೇರಿಗೆ ಕೊಂಡೊಯ್ದರು. ಅನಂತರ ಅವರನ್ನು ಸಮಾಧಾನ ಪಡಿಸಿದ ಅಧಿಕಾರಿಗಳು ಸೇರಿ ಅಂತ್ಯಕ್ರಿಯೆ ನಡೆಸಿದರು.