😓ಕವನ  ಕಂಬನಿ😓 ಉಷಾ ಎಂ ಅವರ ಮನದಲ್ಲಿ ಮೂಡಿಬಂದ ಕವನ

😓ಕವನ ಕಂಬನಿ😓 ಉಷಾ ಎಂ ಅವರ ಮನದಲ್ಲಿ ಮೂಡಿಬಂದ ಕವನ

' ಚಂದ್ರಗಿರಿಯ ತೀರದಲಿ' ಜನಿಸಿ
ಶಿಕ್ಷಣದ ಶಕ್ತಿಯಿಂದ 'ಸಹನಾ'
ಮೂರ್ತಿ ಎನಿಸಿ ,ಸಾಹಿತ್ಯ ಕೃಷಿಯೊಂದಿಗೆ 'ಪಯಣ ' ಬೆಳೆಸಿ,
ವಿರೋಧಿಗಳ 'ಸುಳಿ' ಯಲ್ಲಿ
ಸಿಲುಕಿದರೂ ಮಿನುಗಿದೆ 'ವಜ್ರ'ದಂತೆ
'ಅರ್ಧರಾತ್ರಿಯಲಿ ಹುಟ್ಟಿದ ಕೂಸಿ'
ಗಾಗಿ ಮೌಢ್ಯಗಳ 'ಪಂಜರ'ವ ತೊರೆದೆ..'ಚಪ್ಪಲಿಗಳ' ಸವೆಸುತ್ತಾ
ಜೀಕಿದೆ ಸಾಹಿತ್ಯದ'ಇಳಿಜಾರಿ' ನಲ್ಲಿ.
ಕೃತಿ ' ಕಾಣಿಕೆ' ಗಳ ಕನ್ನಡಕ್ಕಿತ್ತೆ.
'ಪ್ರವಾಹಗಳ ಸುಳಿ'ಯಲ್ಲಿ ಸಿಕ್ಕಿ
'ತಳ ಒಡೆದ ದೋಣಿ' ಯಲಿ ಸಂಚರಿಸುವ
'ಸಹನಾ' 'ಸುಮಯ' ರಿಗೆ
ಭರವಸೆಯ'ಖೆಡ್ಡಾ' ವನು ಕಾಣಿಸಿದೆ
ಕನ್ನಡ ನಾಡು ನುಡಿಗಳ ಸೇವಕಿ
ಪ್ರಶಸ್ತಿ ,ಪುರಸ್ಕಾರ ಗಳ ಸಾಧಕಿ
ಗೆಳತಿಯರ ಮನಸ್ಸಿನ 'ಗಗನಸಖಿ'
ಹೋರಾಟದ ಹಾದಿ ಜೀವನ ಪೂರಾ
'ಕದನವಿರಾಮ' ಪಡೆದ ಕನ್ನಡತಿ ಸಾರಾ
          ಉಷಾ.ಎಂ

Ads on article

Advertise in articles 1

advertising articles 2

Advertise under the article