ನಾಸಿಕ್-ಶಿರಡಿ ಹೆದ್ದಾರಿಯಲ್ಲಿ ಬಸ್-ಟ್ರಕ್ ನಡುವೆ ಭೀ#ಕರ ಅಪಘಾತ: 10 ಮಂದಿ ಭಕ್ತರು ಸಾ#ವು: 17 ಮಂದಿ ಸ್ಥಿತಿ ಗಂ#ಭೀರ

ನಾಸಿಕ್-ಶಿರಡಿ ಹೆದ್ದಾರಿಯಲ್ಲಿ ಬಸ್-ಟ್ರಕ್ ನಡುವೆ ಭೀ#ಕರ ಅಪಘಾತ: 10 ಮಂದಿ ಭಕ್ತರು ಸಾ#ವು: 17 ಮಂದಿ ಸ್ಥಿತಿ ಗಂ#ಭೀರಮಹಾರಾಷ್ಟ್ರ: ಐಷಾರಾಮಿ ಬಸ್​ ಹಾಗು ಟ್ರಕ್​ ನಡುವೆ ನಡೆದ ಭೀ#ಕರ ಅಪಘಾತದಲ್ಲಿ ಶಿರಡಿ ಸಾಯಿಬಾಬಾ ದರ್ಶನ ಪಡೆಯಲು ತೆರಳುತ್ತಿದ್ದ 7 ಮಹಿಳೆಯರು ಸೇರಿಂದತೆ 10 ಮಂದಿ ಭಕ್ತರು ಮೃ#ತಪಟ್ಟಿದ್ದು, 17 ಮಂದಿಯ ಸ್ಥಿತಿ ಗಂ#ಭೀರವಾಗಿ ಗಾಯಗೊಂಡಿರುವ ಘಟನೆ ನಾಸಿಕ್​ನ ಸಿನ್ನಾರ್​ ಹೆದ್ದಾರಿಯಲ್ಲಿ ನಡೆದಿದೆ.

ನಾಸಿಕ್-ಶಿರಡಿ ಹೆದ್ದಾರಿಯಲ್ಲಿ ಈ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ 10 ಮಂದಿ ಸಾ#ವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. 

ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ನಾಸಿಕ್‌ನ ಸಿನ್ನಾರ್ ತೆಹಸಿಲ್‌ನ ಪಥರೆ ಶಿವಾರ್ ಬಳಿ ಶುಕ್ರವಾರ ಬೆಳಗ್ಗೆ  7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಿರಡಿ ಸಾಯಿಬಾಬಾ ದರ್ಶನ ಪಡೆಯಲು ತೆರಳುತ್ತಿದ್ದ ಐಷಾರಾಮಿ ಬಸ್​ನಲ್ಲಿ 50ಕ್ಕೂ ಹೆಚ್ಚು ಭಕ್ತರಿದ್ದರು. ಈ ವೇಳೆ ಗಾಯಾಳುಗಳನ್ನ ಸಿನ್ನಾರ್​ ಗ್ರಾಮೀಣಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ.

ಈ ದುರ್ಘಟನೆಯಲ್ಲಿ ಸಾ#ವನ್ನಪ್ಪಿದವರ ಪೈಕಿ 7 ಮಹಿಳೆಯರು, ಇಬ್ಬರು ಸಣ್ಣ ಹುಡುಗರು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಗಾಯಾಳುಗಳನ್ನು ಸಿನ್ನಾರ್ ಗ್ರಾಮಾಂತರ ಆಸ್ಪತ್ರೆ ಹಾಗು ಸಿನ್ನಾರ್‌ನಲ್ಲಿರುವ ಯಶವಂತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂ#ಭೀರವಾಗಿರುವುದರಿಂದ ಸಾ#ವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article