ಮೂಡಬಿದ್ರಿ ಕಾಶಿಪಟ್ನ ದಾರುನ್ನೂರ್ ವಿದ್ಯಾ ಸಂಸ್ಥೆಗೆ ಭೇಟಿ ನೀಡಿದ ಇನಾಯತ್ ಅಲಿ
ಮೂಡಬಿದ್ರಿ(Headlineskannada): ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಬುಧವಾರ ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ನ ಸಂಸ್ಥೆಗೆ ಭೇಟಿ ನೀಡಿದರು.
ದಾರುನ್ನೂರ್ ಕೇಂದ್ರ ಸಮಿತಿಯ ವತಿಯಿಂದ ಸಾಮಾಜಿಕ ಕ್ಷೇತ್ರದಲ್ಲಿ ಇನಾಯತ್ ಅಲಿಯವರ ಕಾರ್ಯವೈಖರಿಯನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕರ್ಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಹಾಗೂ ದಾರುನ್ನೂರ್ ಸಂಸ್ಥೆಯ ಅಧ್ಯಕ್ಷರಾದ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ವಹಿಸಿದ್ದರು. ದಾರುನ್ನೂರ್ ವಿದ್ಯಾ ಸಂಸ್ಥೆಯ ಶೈಕ್ಷಣಿಕ ಪ್ರಗತಿ ಹಾಗೂ ಪಠ್ಯ ಪದ್ಧತಿಯ ಬಗ್ಗೆ ಸೀನಿಯರ್ ಸೆಕೆಂಡರಿ ಅಂತಿಮ ವರ್ಷದ ವಿದ್ಯಾರ್ಥಿ ಶುಮೈಲ್ ಅತಿಥಿಗಳಿಗೆ ಕಿರುಪರಿಚಯ ನೀಡಿದರು.
ಬಳಿಕ ದಾರುನ್ನೂರ್ ಕೇಂದ್ರ ಸಮಿತಿಯ ಗೌರವಾರ್ಪಣೆಯನ್ನು ಸ್ವೀಕರಿಸಿದ ಇನಾಯತ್ ಅಲಿಯವರು ಮರ್ಹೂಂ ನೌಶಾದ್ ಹಾಜಿಯವರು ಸಮಾಜಕ್ಕೆ ನೀಡಿದ ಕೊಡುಗೆಗಳು ಹಾಗೂ ಪೈಗಂಬರ್ ಮುಹಮ್ಮದ್ (ಸ.ಅ) ಸಮಾಜ ಸೇವೆಯ ಮೂಲಕ ಹೇಗೆ ಜನಮನ್ನಣೆಯನ್ನು ಗಳಿಸಿದರು ಎಂಬ ವಿಚಾರದ ಬಗ್ಗೆ ಮಾತನಾಡಿದರು.
ಕೇಂದ್ರ ಸಮಿತಿಯ ಕೋಶಾಧಿಕಾರಿ ಜನಾಬ್ ಉಸ್ಮಾನ್ ಹಾಜಿಯವರು ಅತಿಥಿಗಳನ್ನು ಸ್ವಾಗತಿಸುತ್ತಾ ಜನಾಬ್ ಇನಾಯತ್ ಅಲಿಯವರು ಸಮಾಜ ಸೇವೆಯ ಮೂಲಕ ಮನ್ನಣಿಯನ್ನು ಗಳಿಸಿದ ನಾಯಕ ಎಂದು ಬಣ್ಣಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಿಗ್ರಿ ಪ್ರಥಮ ವರ್ಷ ವಿದ್ಯಾರ್ಥಿ ಝೈದ್ ವಿಟ್ಲ ನಿರ್ವಹಿಸಿ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಸ್ಸಮದ್ ವಂದಿಸಿದರು.
ಕಾರ್ಯಕ್ರಮದಲ್ಲಿ ದಾರುನ್ನೂರ್ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಹಾಸ್ಕೋ ಅಬ್ದುಲ್ ರಹಿಮಾನ್ ಹಾಜಿ. ಜೊತೆ ಕಾರ್ಯದರ್ಶಿ ಅದ್ದು ಹಾಜಿ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾದ್ಯಕ್ಷರೂ ದಾರುನ್ನೂರ್ ಪಿ.ಟಿ.ಎ ಸಮಿತಿಯ ಅಧ್ಯಕ್ಷರಾದ ಫಕೀರಬ್ಬ ಮಾಸ್ಟರ್, ಲೆಕ್ಕ ಪರಿಶೋಧಕರಾದ ಅಬೂ ಸಾಲಿ ಹಾಸ್ಕೋ, ಎಂ.ಜಿ. ಹಾಜಿ ತೋಡಾರ್, ದಾರುನ್ನೂರ್ ಯು.ಎ.ಇ ರಾಷ್ಟ್ರೀಯ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಶಂಸುದ್ದೀನ್ ಸುರಲ್ಪಾಡಿ, ಸತ್ತಾರ್ ಕೃಷ್ಣಪುರ, ಅಸಿಫ್ ಆದರ್ಶ್ ಸೂರಲ್ಪಾಡಿ, ಮೊಹಮ್ಮದ್ ಶಾಲಿ ಎಂ. ಎಸ್,ಅದ್ದು, ಪ್ರಾಂಶುಪಾಲರಾದ ಅಮೀನ್ ಹುದವಿ, ಮುಖ್ಯ ಶಿಕ್ಷಕರಾದ ಹುಸೈನ್ ರಹ್ಮಾನಿ, ಉಪ ಪ್ರಾಂಶುಪಾಲರಾದ ತ್ವಾಹಾ ಹುದವಿ, ವ್ಯವಸ್ಥಾಪಕರಾದ ಅಬ್ದುಲ್ ಹಕೀಂ, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.