ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಭ್ರಷ್ಟಾಚಾರದ ವಿರುದ್ದ ಪ್ರಜಾಧ್ವನಿ ಮೊಳಗಲಿ: ವಿನಯ ಕುಮಾರ್ ಸೊರಕೆ

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಭ್ರಷ್ಟಾಚಾರದ ವಿರುದ್ದ ಪ್ರಜಾಧ್ವನಿ ಮೊಳಗಲಿ: ವಿನಯ ಕುಮಾರ್ ಸೊರಕೆ

ಉಡುಪಿ(Headlineskannada): ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡಿ ಅಭಿವೃದ್ಧಿ ಕೆಲಸಗಳು  ಕುಂಠಿತವಾಗಿದೆ .ಆಳುವ ಬಿಜೆಪಿ ಪಕ್ಷ ಸುಳ್ಳು ಮತ್ತು ಭಾವನಾತ್ಮಕ ಸಂಗತಿಗಳ ಮೂಲಕ ಅಧಿಕಾರವನ್ನು ಹಿಡಿಯುವ ಹುನ್ನಾರದಲ್ಲಿದೆ. ಈ ಬಗ್ಗೆ ಜನ ಸಾಮಾನ್ಯರು ತಮ್ಮ ಸ್ವರವನ್ನು ಎತ್ತ ಬೇಕಾಗಿದೆ. ಹಾಗಾಗಿ ಜನ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಮತ್ತು ವಿರೋಧ ಪಕ್ಷದ ನಾಯಕರಾದ ಶ್ರೀ ಎಸ್. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹೊರಟ ಪ್ರಜಾಧ್ವನಿ ಬಸ್ಸ್ ಯಾತ್ರೆ ಯಶಸ್ವಿಯಾಗಲಿ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಶುಭ ಹಾರೈಸಿದ್ದಾರೆ.

ಭಾನುವಾರ ಬೆಳಿಗ್ಗೆ 10 ಗಂಟೆಗೆ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲು ಮೈದಾನದಲ್ಲಿ ಜರಗುವ ಪ್ರಜಾಧ್ವನಿ ಯಾತ್ರೆ - ಸಮಾವೇಶದ ಚಪ್ಪರ ನಿರ್ಮಾಣಕ್ಕೆ ಚಾಲನೆ ಕೊಟ್ಟು ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ, ಜಿಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು , ಪ್ರಚಾರ ಸಮಿತಿ ಅಧ್ಯಕ್ಷರಾದ ಹರೀಶ್ ಕಿಣಿ, ರಾಜ್ಯ ಸಂಯೋಜಕ ರಾದ ದಿನೇಶ್ ಪುತ್ರನ್, ಕಾಂಗ್ರೆಸ್ ನಾಯಕರಾದ  ಕೃಷ್ಣಮೂರ್ತಿ ಆಚಾರ್ಯ, ರಮೇಶ್ ಕಾಂಚನ್, ಪ್ರಶಾಂತ್ ಜತ್ತನ್ನ , ಪ್ರಖ್ಯಾತ್ ಶೆಟ್ಟಿ ,ಎಂ.ಎ. ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ವೆರೋನಿಕಾ ಕರ್ನೇಲಿಯೋ , ರೋಷನಿ ಒಲಿವರ್, ಡಾ. ಸುನೀತಾ ಶೆಟ್ಟಿ ,ಉದ್ಯಾವರ ನಾಗೇಶ್ ಕುಮಾರ್ ,ಸುಹೇಲ್ ರಹಮತ್, ಶಬರೀಶ್ ಸುವರ್ಣ , ಜಯಸೇರಿಗಾರ್, ಕಾರ್ಕಳ ಮಹಮ್ಮದ್ ಇರ್ಷಾದ್, ಇಸ್ಮಾಯಿಲ್ ಆತ್ರಾಡಿ, ಜಯ ಕುಮಾರ್,ದಿಲೀಪ್ ಹೆಗ್ಡೆ ಕುಕ್ಕೆಹಳ್ಳಿ, ಆನಂದ ಕಿದಿಯೂರು ,ಜೀತೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು

Ads on article

Advertise in articles 1

advertising articles 2

Advertise under the article