ಉಡುಪಿ: ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋ#ಚಿ ಪರಾರಿಯಾದ ಕ#ಳ್ಳರು

ಉಡುಪಿ: ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋ#ಚಿ ಪರಾರಿಯಾದ ಕ#ಳ್ಳರು

ಉಡುಪಿ (Headlines Kannada): ಡ್ರಾಪ್ ಕೊಡುವ ನೆಪದಲ್ಲಿ ಬಂದ ದುಷ್ಕರ್ಮಿಗಳಿಬ್ಬರು ವ್ಯಕ್ತಿಯೊಬ್ಬರ ಬಳಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ದೋ#ಚಿಕೊಂಡು ಪರಾರಿಯಾದ ಘಟನೆ ಕಾರ್ಕಳ ಬಸ್ ನಿಲ್ದಾಣದ ಬಳಿ ನಡೆದಿದೆ.

ರೆಂಜಾಳ ಗ್ರಾಮದ ಸುಧಾಕರ ಶೆಟ್ಟಿ ಹಣ ಕಳೆದುಕೊಂಡ ವ್ಯಕ್ತಿ. ಇವರು‌ ಬೆಂಗಳೂರಿನಲ್ಲಿ ಬೇಕರಿ ವ್ಯವಹಾರ  ಮಾಡಿಕೊಂಡಿದ್ದು, ಜ.4ರಂದು ಪೂಜಾ ಕಾರ್ಯಕ್ರಮದ ನಿಮಿತ್ತ ತನ್ನ ಊರಾದ ಕಾರ್ಕಳದ ರೆಂಜಾಳಕ್ಕೆ ಬಂದಿದ್ದರು. ಬಳಿಕ ಪೂಜಾ ಕಾರ್ಯ ಮುಗಿಸಿ, ಜ.5ರಂದು 10ಗಂಟೆಗೆ ರೆಂಜಾಳದ ಮನೆಯಿಂದ  ಹೊರಟು ವಿಶಾಲ್ ಬಸ್ ಕಛೇರಿಗೆ ಬಂದಿದ್ದರು. 

ಬಸ್ ಬರಲು ತಡವಿದ್ದ ಕಾರಣ ಮದ್ಯಪಾನ ಮಾಡಲು ಪಕ್ಕದಲ್ಲಿರುವ  ಕಿಂಗ್ಸ್ ಬಾರಿಗೆ ಹೋಗಿದ್ದರು. ಬಳಿಕ ರಾತ್ರಿ 11.45ಕ್ಕೆ ವಿಶಾಲ್  ಬಸ್  ಕಛೇರಿಗೆ  ಹೋಗುವ ಬದಲು ಕಾರ್ಕಳ  ಬಸ್  ಸ್ಟಾಂಡ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು, ನೀವು ಎಲ್ಲಿಗೆ  ಹೋಗುತ್ತೀರಿ ಎಂದು ಕೇಳಿ ನಾವು ಬಸ್ ಸ್ಟಾಂಡ್‌ಗೆ  ಬಿಡುತ್ತೇವೆಂದು ಹೇಳಿದ್ದರು. ಬಳಿಕ ಯಾರಾದರು ನೋಡಿದರೆ ನಿಮ್ಮ  ಚಿನ್ನ  ಹಾಗೂ ಹಣವನ್ನು ತೆಗೆದುಕೊಳ್ಳುತ್ತಾರೆ. ಅದನ್ನು ಜಾಗೃತೆಯಾಗಿ ಚೀಲದಲ್ಲಿ ಇಟ್ಟುಕೊಳ್ಳಿ ಎಂದು ತಿಳಿಸಿದ್ದರು. 

ಸುಧಾಕರ ಶೆಟ್ಟಿ ಮದ್ಯದ ನಶೆ ಇಳಿದ ಮೇಲೆ ನೋಡಿದಾಗ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಚೈನ್, ಉಂಗುರ-1 ಮತ್ತು ನವರತ್ನ ಉಂಗುರ ಮತ್ತು ಕಿಸೆಯಲ್ಲಿದ್ದ  ನಗದು ರೂಪಾಯಿ 1500/ ಹಾಗೂ  ಮೊಬೈಲ್-1 ಇರಲಿಲ್ಲ. ಇಬ್ಬರು ದು#ಷ್ಕರ್ಮಿಗಳು ಡ್ರಾಪ್ ಕೊಡುವುದಾಗಿ ನಂಬಿಸಿ ಒಟ್ಟು 1,52,500 ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋ#ಚಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article