ಗಡ್ಕರಿಗೆ ಜೀವ ಬೆ#ದರಿಕೆ ಕರೆ ಪ್ರಕರಣ: ಹಿಂಡಲಗಾ ಜೈಲಿನಲ್ಲಿ ಇನ್ನೂ ಪತ್ತೆಯಾಗದ ಮೊಬೈಲ್ ಫೋನ್!

ಗಡ್ಕರಿಗೆ ಜೀವ ಬೆ#ದರಿಕೆ ಕರೆ ಪ್ರಕರಣ: ಹಿಂಡಲಗಾ ಜೈಲಿನಲ್ಲಿ ಇನ್ನೂ ಪತ್ತೆಯಾಗದ ಮೊಬೈಲ್ ಫೋನ್!

 

ಬೆಳಗಾವಿ(Headlineskannada): ಇತ್ತೀಚಿಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬೆ#ದರಿಕೆ ಕರೆ ಮಾಡಿದ್ದ ಕೈದಿ ಜಯೇಶ್‌ ಪೂಜಾರಿ ಬಳಸಿದ್ದ ಮೊಬೈಲ್ ಫೋನ್ ತನಿಖೆ ನಡೆಸಿರುವ ಅಧಿಕಾರಗಳಿಗೆ ಸಿಕ್ಕಿಲ್ಲ ಎನ್ನಲಾಗಿದೆ.

ನಿತಿನ್ ಗಡ್ಕರಿಯವರ ನಾಗ್ಪುರದ ಕಚೇರಿಗೆ ಶನಿವಾರ ಬೆ#ದರಿಕೆ ಕರೆ ಮಾಡಿದ್ದ ಕೈದಿ ಜಯೇಶ್‌ ಪೂಜಾರಿ, ತಾನು ಭೂಗತಪಾತಕಿ ದಾವೂದ್‌ ಇಬ್ರಾಹಿಂ ತಂಡದ ಸದಸ್ಯನಾಗಿದ್ದು, 100 ಕೋಟಿ ರು. ನೀಡಬೇಕು, ಇಲ್ಲದಿದ್ದರೆ ನಿತಿನ್ ಗಡ್ಕರಿಗೆ ಬಾಂ#ಬ್ ಇಟ್ಟು ಕೊ#ಲ್ಲುವ ಬೆ#ದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿದೆ.

ಬೆ#ದರಿಕೆ ಕರೆ ಮಾಡಿದ ಬೆನ್ನಲ್ಲೇ ATS ಅಧಿಕಾರಿಗಳಿಂದ ಹಿಂಡಲಗಾ ಜೈಲಿನಲ್ಲಿರುವ ಜಯೇಶ್‌ ಪೂಜಾರಿಯನ್ನು ವಿಚಾರಣೆ ನಡೆಸಿದ್ದರು. ಬಳಿಕ ಪೊಲೀಸ್ ತಂಡಗಳು ಜೀವಾವಧಿ ಅಪರಾಧಿ ಜಯೇಶ್ ಪೂಜಾರಿಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೂಜಾರಿ ತಾನು ಬೆ#ದರಿಕೆ ಕರೆ ಮಾಡಿರುವುದನ್ನು ನಿರಾಕರಿಸಿದ್ದಾನೆ ಎಂದು ಹೇಳಲಾಗಿದೆ. ಆದರೆ ಅದನ್ನು ಮಾಡಿದ್ದು ಅವರೇ ಎಂದು ಖಚಿತಪಡಿಸುವ ಲಿಂಕ್‌ಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೈದಿ ಜಯೇಶ್ ಕೈಗೆ ಮೊಬೈಲ್‌ ಫೋನ್ ಕೊಟ್ಟಿದ್ದು ಯಾರು? ಜೈಲಿನೊಳಗೆ ಮೊಬೈಲ್‌ ಫೋನ್ ಹೋಗಿದ್ದು ಹೇಗೆ? ಎಂಬ ಬಗ್ಗೆ ಅಧಿಕಾರಿಗಳಿಗೆ ಇನ್ನೂ ಸುಳಿವು ಸಿಕ್ಕಿಲ್ಲ ಎಂದು ಹೇಳಲಾಗಿದೆ.

ಜನವರಿ 14 ರಂದು ATS ತಂಡ ಹಿಂಡಲಗಾ ಜೈಲಿಗೆ ಭೇಟಿ ನೀಡಿದ್ದು, ಮರುದಿನ ಮತ್ತೊಂದು ತಂಡ ತೆರಳಿದ್ದು, ಅವರು ಜೈಲಿನ ಆವರಣವನ್ನು ಎಷ್ಟೇ ಹುಡುಕಿದ್ದರೂ ಕರೆ ಮಾಡಿರುವ ಫೋನ್ ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

2008ರಲ್ಲಿ ಮಂಗಳೂರಿನಲ್ಲಿ ನಡೆದ ಜೋಡಿ ಕೊ#ಲೆ ಪ್ರಕರಣವೊಂದರಲ್ಲಿ ಜಯೇಶ್ ಪೂಜಾರಿ ಅಪರಾಧಿಯಾಗಿದ್ದು, ಈತ ತನ್ನ ಸೋದರಸಂಬಂಧಿಯ ಹೆಂಡತಿ ಮತ್ತು ಅವರ ಮಗುವನ್ನು ಕೊಂ#ದು ತಲೆಮರೆಸಿಕೊಂಡಿದ್ದನು. 2012ರಲ್ಲಿ ಕೇರಳದಲ್ಲಿ ಪ್ರತ್ಯೇಕ ಪ್ರಕರಣವೊಂದರಲ್ಲಿ ಈತನನ್ನು ಬಂಧಿಸಲಾಗಿತ್ತು. 2016 ರಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದ ಜಯೇಶ್ ಪೂಜಾರಿಯನ್ನು ಬಳಿಕ ಬಂಧಿಸಲಾಯಿತು. ಭದ್ರತೆಯ ದೃಷ್ಟಿಯಿಂದ ಈಗ ಈತನನ್ನು ಹಿಂಡಲಗಾ ಜೈಲಿನಲ್ಲಿ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ.

Ads on article

Advertise in articles 1

advertising articles 2

Advertise under the article