ಬಜರಂಗದಳದ ಸುನೀಲ್ ಮೇಲೆ ಹ#ಲ್ಲೆ ಪ್ರಕರಣ; ಆರೋಪಿಯ ತಂಗಿಗೆ ಚುಡಾಯಿಸುತ್ತಿದ್ದುದ್ದಕ್ಕಾಗಿ ನಡೆದ ಕೃ#ತ್ಯ: ಶಿವಮೊಗ್ಗ SP ಮಿಥುನ್ ಕುಮಾರ್ ಹೇಳಿದ್ದೇನು..?

ಬಜರಂಗದಳದ ಸುನೀಲ್ ಮೇಲೆ ಹ#ಲ್ಲೆ ಪ್ರಕರಣ; ಆರೋಪಿಯ ತಂಗಿಗೆ ಚುಡಾಯಿಸುತ್ತಿದ್ದುದ್ದಕ್ಕಾಗಿ ನಡೆದ ಕೃ#ತ್ಯ: ಶಿವಮೊಗ್ಗ SP ಮಿಥುನ್ ಕುಮಾರ್ ಹೇಳಿದ್ದೇನು..?ಶಿವಮೊಗ್ಗ(Headlineskannada): ಸಾಗರ ಪಟ್ಟಣ ಬಜರಂಗದಳ ಸಂಘಟನೆಯ ಸಹ ಸಂಚಾಲಕ ಸುನೀಲ್ ಮೇಲೆ ಹ#ಲ್ಲೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತನ್ನ ತಂಗಿಗೆ ಚುಡಾಯಿಸುತ್ತಿದ್ದ ಕಾರಣಕ್ಕೆ ಸುನೀಲ್ ಮೇಲೆ ಆರೋಪಿ ಸಮೀರ್ ಹ#ಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಹ#ಲ್ಲೆಗೀಡಾಗಿರುವ ಸುನೀಲ್ ಕಳೆದ ನಾಲ್ಕೈದು ತಿಂಗಳಿಂದ ಸಮೀರ್ ಸಹೋದರಿಯನ್ನು ಚುಡಾಯಿಸಿ, ಕಿ#ರುಕುಳ ನೀಡುತ್ತಿದ್ದ ಎಂಬ ಕಾರಣಕ್ಕೆ ಸೋಮವಾರ ಬೆಳಗ್ಗೆ ಸುನಿಲ್ ಮೇಲೆ ಸಮೀರ್ ಹ#ಲ್ಲೆಗೆ ಯತ್ನಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ ಕೆ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹ#ಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಸೇರಿದಂತೆ 3 ಮಂದಿ  ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸುನೀಲ್ ಕಳೆದ ನಾಲ್ಕೈದು ತಿಂಗಳಿಂದ ಸಮೀರ್ ಸಹೋದರಿಯನ್ನು ಚುಡಾಯಿಸುತ್ತಿದ್ದನು. ಸಮೀರ್ 2-3 ಬಾರಿ ಸುನೀಲ್‌ಗೆ ಎಚ್ಚರಿಕೆ ನೀಡಿ ತನ್ನ ತಂಗಿಗೆ ತೊಂದರೆ ನೀಡದಂತೆ ಕೇಳಿಕೊಂಡಿದ್ದ. ಆದರೆ, ಸುನೀಲ್ ಖುದ್ದು ಸಮೀರ್ ಗೆ ಫೋನ್ ಮಾಡಿ ಆತನ ಸಹೋದರಿಯ ಮೊಬೈಲ್ ಫೋನ್ ನಂಬರ್ ಕೇಳುತ್ತಿದ್ದ. ಈ ಬಗ್ಗೆ ನಾವು ಸಮೀರ್'ಗೆ ಕರೆ ಮಾಡಿದ ದಾಖಲೆಗಳನ್ನು ಪರಿಶೀಲಿಸಿದಾಗ ಈ ಸತ್ಯಾಂಶ  ನಿಜವೆಂದು ಸಾಬೀತಾಗಿದೆ ”ಎಂದು ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. 

ಅಲ್ಲದೆ ಸೋಮವಾರ ಬೆಳಗ್ಗೆ ಸಮೀರ್ ಲಾಡ್ಜ್‌ವೊಂದರಿಂದ ಹೊರಗೆ ಬಂದು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಆತನನ್ನು ತಡೆದ ಸುನೀಲ್ ತೀವ್ರ ವಾಗ್ವಾದ ನಡೆಸಿದ್ದಾನೆ. ಈ ವೇಳೆ ಸಮೀರ್ ತನ್ನ ಬಳಿ ಇದ್ದ ಮೇಕೆಗಳಿಗೆ ಹುಲ್ಲು ಕೊಯ್ಯುವ ಮ#ಚ್ಚನಿಂದ ಸುನಿಲ್ ಮೇಲೆ ಹ#ಲ್ಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.

ಸುನೀಲ್ ನನ್ನನ್ನು ಚುಡಾಯಿಸುತ್ತಿದ್ದ, ಹಿಜಾಬ್ ಧರಿಸಬೇಡ ಎಂದು ಬಲವಂತ ಮಾಡುತ್ತಿದ್ದ: ಸಮೀರ್ ಸಹೋದರಿ

ಸಾಗರದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಸಮೀರ್ ಸಹೋದರಿ, ಸುನೀಲ್ ತನ್ನನ್ನು ನಿರಂತರವಾಗಿ ಚುಡಾಯಿಸುತ್ತಿದ್ದ ಮತ್ತು ಹಿಜಾಬ್ ಧರಿಸಬೇಡ ಎಂದು ತನಗೆ ಬಲವಂತ ಮಾಡುತ್ತಿದ್ದರು ಎಂದು ಆರೋಪಿಸಿದ್ದಾಳೆ. 

ಚುಡಾಯಿಸುವ ಜೊತೆಗೆ ಸುನೀಲ್ ನನ್ನನ್ನು ಮ#ತಾಂತರಕ್ಕೆ ಒತ್ತಾಯಿಸುತ್ತಿದ್ದ. ಈ ಬಗ್ಗೆ ನೊಂದು ಚುಡಾಯಿಸಿದ ಬಗ್ಗೆ ನಾನು ನನ್ನ ಸಹೋದರನಿಗೆ ಹೇಳಿದೆ. ಆದ್ದರಿಂದ ನನ್ನ ಸಹೋದರ ಸುನಿಲ್'ಗೆ ಎಚ್ಚರಿಕೆ ಕೊಟ್ಟಿರಬಹುದು.  ಆದರೆ ಸುನಿಲ್ ಮೇಲೆ ಹ#ಲ್ಲೆ ಮಾಡುವ ಯಾವುದೇ ಉದ್ದೇಶ ನನ್ನ ಸಹೋದರನಿಗೆ  ಇರಲಿಲ್ಲ. ಹೀಗಾಗಿ ನನ್ನ ಸಹೋದರನನ್ನುಕೂಡಲೇ ಬಿಡುಗಡೆ ಮಾಡಿ ಎಂದು ಪೊಲೀಸರನ್ನು ಒತ್ತಾಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article