ನಾನೊಬ್ಬ ಹಿಂದೂ, ನನ್ನ ವಿರೋಧವಿರುವುದು  ಹಿಂದುತ್ವಕ್ಕೆ: ಸಿದ್ದರಾಮಯ್ಯ

ನಾನೊಬ್ಬ ಹಿಂದೂ, ನನ್ನ ವಿರೋಧವಿರುವುದು ಹಿಂದುತ್ವಕ್ಕೆ: ಸಿದ್ದರಾಮಯ್ಯ



ಹುಬ್ಬಳ್ಳಿ(Headlines Kannada): ನಾನೊಬ್ಬ ಹಿಂದೂ, ಆದರೆ ಹಿಂದುತ್ವಕ್ಕೆ ನನ್ನ ವಿರೋಧವಿದೆ. ಧರ್ಮವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ವಿರೋಧವಿದೆ. ಸಂವಿಧಾನದಲ್ಲಿ ಎಲ್ಲ ಧರ್ಮಗಳು ಸಮಾನ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿರುವ ಹಿಂದೂ, ಕ್ರೈಸ್ತ, ಮುಸ್ಲಿಂ ಎಲ್ಲ ಧರ್ಮಗಳು ಕೂಡ ಸಮಾನವಾಗಿವೆ. ಯಾವುದೇ ಧರ್ಮ ದೊಡ್ಡದು ಅಲ್ಲ, ಚಿಕ್ಕದೂ ಅಲ್ಲ. ಧರ್ಮ ಮತ್ತು ಜಾತಿ ಆಧಾರದ ಮೇಲೆ ರಾಜಕಾರಣ ಮಾಡುವುದಕ್ಕೆ ನನ್ನ ವಿರೋಧವಿದೆ ಎಂದರು.

ನಮ್ಮದು ಬಹುತ್ವದ ದೇಶ. ಎಲ್ಲರನ್ನೂ ಸರಿಸಮಾನರಾಗಿ ಮನುಷ್ಯರಾಗಿ ಕಾಣಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಸಂದರ್ಭದಲ್ಲಿ ಸ್ಥಾಪನೆಯಾದ RSS, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದೆಯಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸ್ವಾತಂತ್ರ್ಯ ಹೋರಾಟದಲ್ಲಿ RSS​ನವರು ಭಾಗಿಯಾಗಿಲ್ಲ. 1925-47ರವರೆಗೆ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಯಾರಾದರೂ ಭಾಗವಹಿಸಿದ್ರೆ ಹೇಳಿ ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತನ್ನ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು...?

ಪ್ರಧಾನಿ ಮೋದಿ ಮುಂದೆ ಮುಖ್ಯಮಂತ್ರಿ ಬೊಮ್ಮಾಯಿ ನಾಯಿಮರಿ ರೀತಿ ಇರ್ತಾರೆ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಕೊಂಡ ಸಿದ್ದರಾಮಯ್ಯ, ಹಳ್ಳಿ ಭಾಷೆಯಲ್ಲಿ ಹೆದರುವವರಿಗೆ ನಾಯಿಮರಿ ತರಹ ಅನ್ನುತ್ತೇವೆ. ಹಳ್ಳಿ ಭಾಷೆಯಲ್ಲಿಯೇ ನಾನು ಈ ರೀತಿ ಹೇಳಿಕೆ ನೀಡಿರುವುದು. ಮುಖ್ಯಮಂತ್ರಿಗಳಿಗೆ ಅಗೌರವ ಮಾಡಬೇಕೆಂಬ ಉದ್ದೇಶ ನನಗಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಪ್ರಧಾನಿ ಬಳಿ ಧೈರ್ಯವಾಗಿರಬೇಕು ಅನ್ನೋ ಅರ್ಥದಲ್ಲಿಈ ಮಾತನ್ನು ಹೇಳಿದ್ದೇನೆ. ನನಗೆ ಟಗರು, ಹೌದು ಹುಲಿಯಾ ಅನ್ನುತ್ತಾರೆ, ಅದು ಅವಮಾನನಾ..?  ಬಿ.ಎಸ್.ಯಡಿಯೂರಪ್ಪಗೆ ರಾಜಾಹುಲಿ ಅನ್ನೋದು ಅವಮಾನನಾ ? ಎಂದು ಪ್ರಶ್ನಿಸಿದರು. ನಾವು ಪ್ರಾಣಿ, ಪಕ್ಷಿಗಳು, ಮರಗಳಿಗೆ ಹೋಲಿಕೆ ಮಾಡೋದು ಸಹಜ ಎಂದು ಹೇಳಿದರು.

ವಿಧಾನಸೌಧಕ್ಕೆ ತಂದಿರುವ ಹಣ ಸಚಿವರು ಇಲ್ಲ‌, ಮುಖ್ಯಮಂತ್ರಿಗಳಿಗೆ ಕೊಡೋಕೆ ಇರಬಹುದು..

ವಿಧಾನಸೌಧದ ಪಶ್ಚಿಮ ಗೇಟ್​ನಲ್ಲಿ 10.5 ಲಕ್ಷ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಸಿದ್ದರಾಮಯ್ಯ, ವಿಧಾನಸೌಧದ ಒಳಗೆ ಹಣ ತೆಗೆದುಕೊಂಡು ಬಂದಿದಾರೆ ಅಂದ್ರೆ ಏನರ್ಥ ? ಈ ಹಣ ಅಲ್ಲಿರುವ  ಸಚಿವರು ಇಲ್ಲ‌ವೇ ಮುಖ್ಯಮಂತ್ರಿಗಳಿಗೆ ಕೊಡೋಕೆ ತಂದಿರಬಹುದಲ್ಲವೇ... ಇಂಜನಿಯರೊಬ್ಬ ಯಾವ ಉದ್ದೇಶಕ್ಕೆ ವಿಧಾನಸೌಧಕ್ಕೆ ಹಣ ಹಿಡಿದುಕೊಂಡು ಬರ್ತಾನೆ? ಒಂದಾ ಟ್ರಾನ್ಸಫರ್ ಇರಬೇಕು, ಇಲ್ಲ ಲಂಚ ಕೊಡೋಕೆ ಹಣ ಬಂದಿರಬೇಕು ಎಂದು ಸಂಶಯ ಪಡಬಹುದು. ಈ ಬಗ್ಗೆ ವಿಚಾರಣೆ ಮಾಡಲಿ ಸತ್ಯ ತನ್ನಿಂದತಾನೇ ಹೊರಬರುತ್ತೆ ಎಂದರು.

ರಾಮ ಮಂದಿರವನ್ನು ರಾಜಕೀಯವಾಗಿ ಬಳಸಿಸಕೊಳ್ಳುವುದಕ್ಕೆ ನನ್ನ ವಿರೋಧವಿದೆ...

ರಾಮ ಮಂದಿರ ಕಟ್ಟಿರೋದಕ್ಕೆ ನಮ್ಮ ಯಾವುದೇ ರೀತಿಯ ವಿರೋಧ ಇಲ್ಲ. ಅದನ್ನು ಈವತ್ತು ರಾಜಕೀಯವಾಗಿ ಬಳಸಿಕೊಳ್ಳೋದಕ್ಕೆ ನಮ್ಮ ವಿರೋಧವಿದೆ. ನಾವು ಹಿಂದೆ ಹಳ್ಳಿಗಳಲ್ಲಿ ರಾಮಮಂದಿರ, ಆಂಜನೇಯ ಗುಡಿ ಕಟ್ಟಿಲ್ವಾ? ಕೋಮುವಾದ ಮಾಡೋ ಪಾರ್ಟಿ ದೇಶದಲ್ಲಿ ಜನರನ್ನ ಆಳೋಕೆ ಯೋಗ್ಯ ಅಲ್ಲ. ಧರ್ಮ, ಜಾತಿ ಹೆಸರಲ್ಲಿ ರಾಜಕಾರಣ ಮಾಡೋದು ತಪ್ಪು, ಅದಕ್ಕೆ ನನ್ನ ವಿರೋಧವಿದೆ ಎಂದು ಸಿದ್ದರಾಮಯ್ಯ ಹೇಳಿದರು.


Ads on article

Advertise in articles 1

advertising articles 2

Advertise under the article