ಸಿದ್ದರಾಮಯ್ಯ ಈ ಬಾರಿ ಸ್ಪರ್ಧಿಸತ್ತಿರುವ ಕ್ಷೇತ್ರ ಯಾವುದೇ ಗೊತ್ತೇ..? ಅಧಿಕೃತ ಘೋಷಣೆ ಮಾಡಿದ ಸಿದ್ದು ...

ಸಿದ್ದರಾಮಯ್ಯ ಈ ಬಾರಿ ಸ್ಪರ್ಧಿಸತ್ತಿರುವ ಕ್ಷೇತ್ರ ಯಾವುದೇ ಗೊತ್ತೇ..? ಅಧಿಕೃತ ಘೋಷಣೆ ಮಾಡಿದ ಸಿದ್ದು ...ಕೋಲಾರ(Headlines Kannada): ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದಲೇ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಸೋಮವಾರ ನಗರದ ಮಿನಿ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧೆ ಮಾಡಲು ತಾನು ತೀರ್ಮಾನ ಮಾಡಿದ್ದು, ಪಕ್ಷದ ನಿರ್ಧಾರ ಅಂತಿಮವಾಗಲಿದೆ ಎಂದರು.

ರಾಜ್ಯದ ಜನರ ಆಶೀರ್ವಾದ ಇದ್ದರೆ  ಮಾತ್ರ ನಾವೆಲ್ಲಾ ಉಳಿಯಲು ಸಾಧ್ಯ. ಈ ಹಿಂದೆ ನಾನು ಕೋಲಾರಕ್ಕೆ ಬಂದಾಗ ದೇವಸ್ಥಾನ, ಮಸೀದಿ, ಚರ್ಚ್‍ಗಳಿಗೆ ಭೇಟಿ ನೀಡಿದ್ದೆ.ನಾನು ಚಾಮುಂಡಿ ಕ್ಷೇತ್ರದಲ್ಲಿ 5 ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಬದಾಮಿ ಕ್ಷೇತ್ರದಲ್ಲೂ ನಾನು ಶಾಸಕನಾಗಿದ್ದೇನೆ. ಆದರೆ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದ ಸಿದ್ದರಾಮಯ್ಯ, ನೀವು ಯಾವುದೇ ಕಾರಣಕ್ಕೂ ನನ್ನ ಮೇಲೆ ಸಂಶಯ ಪಡಬೇಡಿ. ಸಿದ್ದರಾಮಯ್ಯ ಹೊರಗಿನವರು ಎಂದು ಕೆಲವರು ಅಪಪ್ರಚಾರ ಮಾಡ್ತಾರೆ. ಆದರೆ ಈಗ ನಾನು ಮಾತು ಕೊಡುತ್ತೇನೆ, ಪ್ರತಿ ವಾರ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಕೂಡ ನನ್ನನ್ನು ಭೇಟಿ ಅವರ ಕಷ್ಟಗಳನ್ನು ಹೇಳಬಹುದು ಎಂದರು.

Ads on article

Advertise in articles 1

advertising articles 2

Advertise under the article