ಉತ್ತರಪ್ರದೇಶ: ಯುವತಿಯೊಬ್ಬಳನ್ನು ಮನೆಗೆ ಕರೆದೊಯ್ದು ಅ#ತ್ಯಾ#ಚಾರ ನಡೆಸಿದ ಯುವಕ; ಪ್ರಕರಣ ಮುಚ್ಚಿ ಹಾಕಲು ಮಾಡಿದ್ದೇನು...?

ಉತ್ತರಪ್ರದೇಶ: ಯುವತಿಯೊಬ್ಬಳನ್ನು ಮನೆಗೆ ಕರೆದೊಯ್ದು ಅ#ತ್ಯಾ#ಚಾರ ನಡೆಸಿದ ಯುವಕ; ಪ್ರಕರಣ ಮುಚ್ಚಿ ಹಾಕಲು ಮಾಡಿದ್ದೇನು...?ಉತ್ತರ ಪ್ರದೇಶ(Headlines Kannada): 18 ವರ್ಷದ ಯುವತಿಯೊಬ್ಬಳ ಮೇಲೆ ಅ#ತ್ಯಾ#ಚಾರ ಎಸಗಿ, ಬಳಿಕ ಬ#ಲವಂತವಾಗಿ ವಿ#ಷ ಕು#ಡಿಸಿದ ಆರೋಪದ ಮೇಲೆ ಒಂದೇ ಕುಟುಂಬದ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.

ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಸಾ#ವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ ಎಂದು ಹೇಳಲಾಗಿದೆ. FIRನಲ್ಲಿ ದಾಖಲಾಗಿರುವ ಆರೋಪಗಳ ಪ್ರಕಾರ, ಜ. 1 ರಂದು ತನ್ನ ಮಗಳು ಯಾವುದೋ ಕೆಲಸಕ್ಕಾಗಿ ಹೊರಗೆ ಹೋಗಿದ್ದು, ಈ ವೇಳೆ  22 ವರ್ಷದ ಪ್ರಮುಖ ಆರೋಪಿ ಕಮಲ್ ಕುಮಾರ್ ಎಂಬಾತ ಆಕೆಯನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ. ಆತನ ಮನೆಯಲ್ಲಿ ಆಕೆಯ ಮೇಲೆ ಅ#ತ್ಯಾ#ಚಾರ ಎಸಗಿದ್ದಾನೆ ಮತ್ತು ಥ#ಳಿಸಿದ್ದಾನೆ ಎಂದು ಸಂತ್ರಸ್ತೆಯ ತಾಯಿ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಯುವತಿಯ ಕಿ#ರುಚಾಟವನ್ನು ಕೇಳಿದ ಆಕೆಯ ತಾಯಿ, ಕಮಲ್ ಕುಮಾರ್‌ನ ಮನೆಗೆ ಬಂದಿದ್ದಾರೆ. ಆದರೆ, ಆರೋಪಿಯ ಕುಟುಂಬ ಸದಸ್ಯರು ಈ ಅ#ಪರಾಧವನ್ನು ಮುಚ್ಚಿಹಾಕುವ ಉದ್ದೇಶದಿಂದ ಯುವತಿಯನ್ನು ಕೊ#ಲ್ಲಲು ಆಕೆಯು ವಿ#ಷ ಸೇ#ವಿಸುವಂತೆ ಮಾಡಿದ್ದಾರೆ ಎಂದಿದ್ದಾರೆ.

ಬಳಿಕ ಯುವತಿಯನ್ನು ತಮ್ಮ ಮನೆಯಿಂದ ಹೊರಗೆ ಎಸೆದಿದ್ದಾರೆ. ಈ ಘಟನೆಯ ನಂತರ ಸಂತ್ರಸ್ತೆಯ ತಾಯಿ ಲಿಖಿತ ದೂರಿನೊಂದಿಗೆ ಜಹಾನಾಬಾದ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ. ಆದರೆ, ಪೊಲೀಸರು FIR ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ FIR ದಾಖಲಿಸಲಾಗಿದೆ.

ಈ ಕೃ#ತ್ಯಕ್ಕೆ ಸಂಬಂಧಿಸಿ ಆರೋಪಿಯ ಪೋಷಕರು, ಕಿರಿಯ ಸಹೋದರ, ಸಹೋದರಿ ಮತ್ತು ಅಜ್ಜಿ ಸೇರಿದಂತೆ ಪ್ರಮುಖ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 (ಅ#ತ್ಯಾ#ಚಾರ), 328 (ಯಾವುದೇ ವ್ಯಕ್ತಿಗೆ ವಿ#ಷ ನೀಡುವುದು), 323 (ಸ್ವಯಂಪ್ರೇರಿತ ಗಾಯಗೊಳಿಸುವುದು), 504 ( ಉದ್ದೇಶಪೂರ್ವಕ ಅವಮಾನ) ಹಾಗು 506 (ಕ್ರಿಮಿನಲ್ ಬೆ#ದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಪ್ರಬಾಶ್ ಚಂದ್ರ ತಿಳಿಸಿದ್ದಾರೆ.ಆದರೆ ಈ ಈವರೆಗೂ ಯಾರೊಬ್ಬರನ್ನು ಬಂಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article