ತ್ವಾಹಿರುಲ್ ಅಹ್ದಲ್ ತಂಙಳ್: ಎಂದೂ ಮಾಸದ ಪ್ರಶೋಭಿತ ಮುಖಾರವಿಂದ!!!
ಕಾಸರಗೋಡು ಜಿಲ್ಲೆಯ ಪುತ್ತಿಗೆಯಲ್ಲಿ ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ಎಂಬ ಬಹುಮುಖ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅಗ್ರಗಣ್ಯ ವಿದ್ವಾಂಸರಾದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್(ಖ.ಸಿ.) ರವರು ಈ ಕಾಲಗಟ್ಟದ ಅದ್ಭುತ ವಿದ್ವತ್ ಪ್ರತಿಭೆಯಾಗಿದ್ದರು.
ಮೊಯ್ಲಾಂಜಿ ಮಾಸ ಪತ್ರಿಕೆಯ ಪ್ರಥಮ ಸಂಚಿಕೆ ಬಿಡುಗಡೆ ಸಂದರ್ಭದಲ್ಲಿ ಮೊಯ್ಲಾಂಜಿ ಮಾಸ ಪತ್ರಿಕೆ ಸಂಪಾದಕ ಎಸ್.ಪಿ. ಹಂಝ ಸಖಾಫಿ ಬಂಟ್ವಾಳ ಅವರು ಮೊಯ್ಲಾಂಜಿ ಮಾಸ ಪತ್ರಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಮರ್ಹೂಂ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರನ್ನು ಆಹ್ವಾನಿಸಿದ್ದರು.
ತ್ವಾಹಿರುಲ್ ಅಹ್ದಲ್ ತಂಙಳ್ ರನ್ನು ನಾನು ಅದೇ ಮೊದಲು ನೋಡಿದ್ದು. ಬಹುಶಃ ಅದೇ ಕೊನೆಯೂ ಆಗಿತ್ತು. ಅವರ ಸ್ನಿಗ್ಧತೆ, ಮುಗ್ದತೆ ಎಂಥವರನ್ನೂ ಆಕರ್ಷಿಸದಿರದು.
ಅಲ್ ಅನ್ಸಾರ್, ಮೊಯ್ಲಾಂಜಿ ಪತ್ರಿಕೆಗಳ ಪ್ರಕಾಶಕರಾದ ಇಬ್ರಾಹಿಂ ಬಾವ ಹಾಜಿ ಯವರು ಯಾವಾಗಲೂ ಬರುವಾಗ ಏನಾದರೊಂದು ಸರ್ಫೈಝ್ ತರುತ್ತಿದ್ದರು.
ಇಂದು ತ್ವಾಹಿರುಲ್ ಅಹ್ದಲ್ ತಂಙಳ್ ರವರು ಬಂದಾಗ ಯಾಕೆ ಇಬ್ರಾಹಿಂ ಬಾವ ಹಾಜಿ ಯವರು ಬರಲಿಲ್ಲ ಎಂದು ನಾವು ಮಾತನಾಡುತ್ತಿದ್ದಾಗ, ಅವರ ಕಾರು ಬಂದು ನಿಂತಿತು. ಅಂದು ಕೂಡ ಅವರು ಬರುವಾಗ ಒಂದು ವಿಶೇಷ ಸರ್ಫೈಝ್ ತಂದಿದ್ದರು.
ಅದು ಬೇರೇನೂ ಆಗಿರಲಿಲ್ಲ, ಸುನ್ನೀ ಜಗತ್ತಿನ ದೊರೆ ಶೈಖುನಾ ತಾಜುಲ್ ಉಲಮಾ ಉಳ್ಳಾಲ ತಂಙಳ್ (ಖ.ಸಿ.) ಆಗಿದ್ದರು. ನಾನಾಗಲೀ ಎಸ್.ಪಿ. ಹಂಝ ಸಖಾಫಿ, ಕೆ.ಎಂ. ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ಯಾರು ಕೂಡ ಇದನ್ನು ನಿರೀಕ್ಷಿಸಿರಲಿಲ್ಲ.
ಬರುವ ಮಾರ್ಚ್ 2 ರಿಂದ 5 ರ ತನಕ ತ್ವಾಹಿರುಲ್ ಅಹ್ದಲ್ ತಂಙಳ್ (ಖ.ಸಿ.) ರವರ ಉರೂಸ್ ನಡೆಯುತ್ತಿದೆ. ಮುಹಿಮ್ಮಾತ್ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ 5000 ಕ್ವಿಂಟಾಲ್ ಅಕ್ಕಿ ಸಂಗ್ರಹಿಸುವ ಯೋಜನೆ ಸಂಸ್ಥೆ ಪರಿಚಯಿಸಿದೆ.
ಕೇರಳ ಕರ್ನಾಟಕ ರಾಜ್ಯಗಳ 1500 ಮಿಕ್ಕ ವಿದ್ಯಾರ್ಥಿಗಳ ಖರ್ಚಿಗಾಗಿ ಭಾರೀ ಮೊತ್ತ ವ್ಯಯವಾಗುತ್ತಿದ್ದು ನಾಡಿನ ಉದಾರಿಗಳಾದ ದಾನಿಗಳ ನೆರವಿನಿಂದ ಈ ಮಹನೀಯ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ನಿರಾತಂಕವಾಗಿ ಮುಂದುವರಿಯುತ್ತಿದೆ.
ಪ್ರತಿಯೊಬ್ಬರೂ ಕೂಡ ಇದು ನಮ್ಮದೇ ಸಂಸ್ಥೆ ಎಂಬ ಭಾವನೆಯಿಂದ ಮುಹಿಮ್ಮಾತ್ ವಿದ್ಯಾ ಸಂಸ್ಥೆಗೆ ತಮ್ಮಿಂದಾಗುವ ರೀತಿಯಲ್ಲಿ ಸಹಾಯ, ಸಹಕಾರಗಳನ್ನು ನೀಡಬೇಕು. 5 ಕಿಲೋ,10 ಕಿಲೋ, 25 ಕಿಲೋ, 50 ಕಿಲೋ, 100 ಕಿಲೋ ಹೀಗೆ ನಮ್ಮಿಂದ ಸಾಧ್ಯವಾಗುವ ರೀತಿಯಲ್ಲಿ ಮುಹಿಮ್ಮಾತ್‌ಗೆ ಅಕ್ಕಿ ದಾನ ಮಾಡಲು ಮುಂದೆ ಬರಬೇಕು.
ಈ ಪುಣ್ಯ ಕಾರ್ಯದ ಕಾರಣದಿಂದ ನಮ್ಮ ಇಹಪರಗಳ ತೊಂದರೆ ಗಳು ದೂರವಾಗಲಿವೆ. 9400555214 ಸಂಖ್ಯೆಗೆ ಗೂಗಲ್ ಪೇ ಮಾಡುವ ಮೂಲಕ ಮುಹಿಮ್ಮಾತ್ ವಿದ್ಯಾ ಸಮುಚ್ಚಯದ ಯಶಸ್ಸಿನಲ್ಲಿ ಸರ್ವರೂ ಸಹಭಾಗಿಗಳಾಗಬೇಕೆಂದು ವಿನಂತಿಸುತ್ತಿದ್ದೇನೆ.
✍️ ಡಿ.ಐ.ಅಬೂಬಕರ್ ಕೈರಂಗಳ