ಗುಜರಾತಿನ ಮದುವೆ ಮನೆಯಲ್ಲಿ 500 ರೂ. ನೋಟುಗಳ ಸುರಿಮಳೆ; ನೋಟಿಗಾಗಿ ಮುಗಿಬಿದ್ದ ಜನ; ವೀಡಿಯೊ ವೈರಲ್
Sunday, February 19, 2023
ಅಹ್ಮದಾಬಾದ್: ಮದುವೆಯ ಮನೆಯಲ್ಲಿ 500 ರೂ. ನೋಟುಗಳ ಸುರಿಮಳೆಯಾದರೆ ಜನ ಏನು ಮಾಡಬಹುದು...! ಅಂಥದ್ದೇ ಒಂದು ಘಟನೆ ಗುಜರಾತ್ನ ಮೆಹಸಾನ ಜಿಲ್ಲೆ ಕೇಕ್ರಿ ತಾಲೂಕಿನ ಅಗೋಲ್ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ.
ಮಾಜಿ ಗ್ರಾ.ಪಂ. ಅಧ್ಯಕ್ಷ ಕರೀಮ್ ಯಾದವ್ ಎಂಬಾತ ತನ್ನ ಸಂಬಂಧಿಕ ರಜಾಕ್ಎಂಬವನ ಮದುವೆಯಲ್ಲಿ ಮನೆಯ ಮೇಲಿಂದ ಮದುಮಗ ಮೆರವಣಿಗೆಯಲ್ಲಿ ಹೋಗುತ್ತಿದ್ದಂತೆಯೇ ಹಣವನ್ನೆಲ್ಲ ಎಸೆದಿದ್ದಾನೆ.
500 ರೂ ಮುಖಬೆಲೆಯ ನೂರಾರು ನೋಟುಗಳನ್ನು ಎರಚುತ್ತಿದ್ದಂತೆಯೇ ಮಾಡುವೆ ಮನೆಯಲ್ಲಿದ್ದ ಜನ ಈ ನೋಟುಗಳನ್ನು ಬಾಚಿಕೊಳ್ಳಲು ಎಡತಾಕುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿವೆ.