ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರು; ಫ್ಲೆಕ್ಸ್, ಬ್ಯಾನರಿನಲ್ಲಿ ಅಪ್ಪು ಫೋಟೋನೇ ಇಲ್ಲ! ಅಭಿಮಾನಿಗಳಿಂದ ಆಕ್ರೋಶ
Tuesday, February 7, 2023
ಬೆಂಗಳೂರು: ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ರಾಜ್ಕುಮಾರ್ ಹೆಸರನ್ನು ಇಡಲಾಗುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸಂಜೆ ಚಾನಲ್ ನೀಡಲಿದ್ದಾರೆ. ಇದಕ್ಕಾಗಿ ಹಾಕಿದ ಫ್ಲೆಕ್ಸ್, ಬ್ಯಾನರಿನಲ್ಲಿ ರಾಜಕೀಯ ನಾಯಕರ ಫೋಟೋ ರಾರಾಜಿಸುತ್ತಿವೆಯೇ ವಿನಃ ಎಲ್ಲಿಯೂ ಪುನೀತ್ ರಾಜ್ಕುಮಾರ್ ಫೋಟೋ ಕಾಣುತ್ತಿಲ್ಲ. ಅಪ್ಪು ಅಭಿಮಾನಿಗಳು ಹಾಗು ಕನ್ನಡಪರ ಸಂಘಟನೆಗಳು ಕಿಡಿಕಾರಿವೆ.
ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರು ಇಡಲು ಇಂದು ಸಿದ್ಧತೆ ನಡೆಸಿದ್ದರೂ ಫ್ಲೆಕ್ಸ್, ಬ್ಯಾನರಿನಲ್ಲಿ ಪುನೀತ್ ಫೋಟೋನೇ ಅಲ್ಲಿ ಕಾಣುತ್ತಿಲ್ಲದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾಜಿಕ ತಾಣಗಳಲ್ಲಿ ಈ ಫ್ಲೆಕ್ಸ್, ಬ್ಯಾನರಿನಲ್ಲಿ ರಾಜಕಾರಣಿಗಳೇ ತುಂಬಿರುವ ಫೋಟೋಟವನ್ನು ಹಂಚಿಕೊಂಡಿರುವ ಅಪ್ಪು ಅಭಿಮಾನಿಗಳು ಹಾಗು ಕನ್ನಡಪರ ಸಂಘಟನೆಗಳು, ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.