ಅಮೆರಿಕದಲ್ಲಿ ಯುವಕನೊಬ್ಬನ ಕೊ#ಲೆ;  ಆಂಧ್ರ ಮೂಲದ ಯುವಕನ ಬಂ#ಧನ

ಅಮೆರಿಕದಲ್ಲಿ ಯುವಕನೊಬ್ಬನ ಕೊ#ಲೆ; ಆಂಧ್ರ ಮೂಲದ ಯುವಕನ ಬಂ#ಧನ

ಅಮೇರಿಕ: ವ್ಯಕ್ತಿಯೊಬ್ಬನನ್ನು ಹ#ತ್ಯೆ ಮಾಡಿದ ಆರೋಪದಲ್ಲಿ ಭಾರತ ಮೂಲದ ಯುವಕನನ್ನು ಅಮೆರಿಕದ ಪೊಲೀಸರು ಬಂ#ಧಿಸಿದ್ದಾರೆ.

ಬಂ#ಧಿತನನ್ನು ಆಂಧ್ರಪ್ರದೇಶ ಮೂಲದ 23 ವರ್ಷದ ರವಿತೇಜ ಗೋಲಿ ಎಂದು ಗುರುತಿಸಲಾಗಿದೆ. ಈಸ್ಟರ್ನ್ ಬಿಎಲ್​ವಿಡಿಯ 3200 ಬ್ಲಾಕ್‌ನಲ್ಲಿ ಭಾನುವಾರ ರಾತ್ರಿ 9:30 ರ ಸುಮಾರಿಗೆ 25 ವರ್ಷದ ಅಖಿಲ್ ಸಾಯಿ ಮಹಂಕಾಳಿ ಎಂಬುವವರನ್ನು ಗುಂ#ಡಿಕ್ಕಿ ಹ#ತ್ಯೆ ಮಾಡಿದ್ದ ಎಂಬ ಆರೋಪದಲ್ಲಿ ರವಿತೇಜನನ್ನು ಬಂಧಿಸಲಾಗಿದೆ.

ಗುಂ#ಡಿನಿಂದಾಗಿ ಮಹಂಕಾಳಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃ#ತಪಟ್ಟಿದ್ದಾರೆ. ಆರೋಪಿ  ರವಿತೇಜ ಗೋಲಿ ಎಂಬಾತನ ಮೇಲೆ ನ#ರಹತ್ಯೆಯ ಆರೋಪ ಮಾಡಲಾಗಿದೆ. ಆರೋಪಿಯನ್ನು ಪ್ರಸ್ತುತ ಮಾಂಟ್ಗೊಮೆರಿ ಕೌಂಟಿ ಡಿಟೆನ್ಶನ್ ಫೆಸಿಲಿಟಿಯಲ್ಲಿ ಇರಿಸಲಾಗಿದೆ. ಕೊ#ಲೆಗೆ ಕಾರಣ ಇನ್ನೂ ಬಹಿರಂಗವಾಗಿಲ್ಲ, ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ.

Ads on article

Advertise in articles 1

advertising articles 2

Advertise under the article