ಬೊಮ್ಮಾಯಿ ಬಜೆಟ್ ಯಾರ ಕಣ್ಣಿಗೂ ಕಾಣದು, ಕೈಗೂ ಸಿಗದು: ಡಿ.ಕೆ.ಶಿವಕುಮಾರ್
Friday, February 17, 2023
ಬೆಂಗಳೂರು: ಕನ್ನಡಿಗರನ್ನು ಮೂರ್ಖರನ್ನಾಗಿ ಮಾಡುವ BJP ಬಜೆಟ್ ವಿರೋಧಿಸಿ ಸಾಂಕೇತಿಕವಾಗಿ ಇಂದು ಕಿವಿ ಮೇಲೆ ಹೂವಿಟ್ಟುಕೊಂಡೇ ಪ್ರತಿಕ್ರಿಯೆ ನೀಡಿದೆ. ಈ ಬಜೆಟ್ ಒಂದು ಬಿಸಿಲು ಕುದುರೆಯಂತಿದೆ. ಯಾರ ಕಣ್ಣಿಗೂ ಕಾಣದು, ಕೈಗೂ ಸಿಗದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ತಾವೂ ಒಂದು ಬಜೆಟ್ ಮಂಡಿಸಿದೆ ಎಂದು ಹೇಳಿಕೊಳ್ಳಲು ಒಂದು ಪ್ರತಿಯನ್ನು ಮನೆಯಲ್ಲಿ ಇಟ್ಕೊಬಹುದು. ಪ್ರತೀ ಮಹಿಳೆಗೆ 2ಸಾವಿರ ರೂ. ನೀಡುವುದಾಗಿ ದೊಡ್ಡದಾಗಿ ಜಾಹೀರಾತು ನೀಡಿದ್ದ ಬಿಜೆಪಿ ಸರ್ಕಾರ ಅದನ್ನು 500 ರೂಪಾಯಿಗೆ ಮೊಟಕುಗೊಳಿಸಿದ್ದು ಏಕೆ? ಉದ್ಯೋಗ ಸೃಷ್ಟಿ, ರೈತರ ಸಬಲೀಕರಣ, ಬೆಲೆಯೇರಿಕೆಗೆ ಪರಿಹಾರ, ಕಾರ್ಮಿಕರು, ಉದ್ಯೋಗದಾತರನ್ನು ಉಳಿಸುವ ಪ್ರಯತ್ನ ಖಂಡಿತ ಮಾಡಿಲ್ಲ. ಇದು ದೂರದೃಷ್ಟಿಯಿಲ್ಲದ ಬಜೆಟ್ ಎಂದು ತಿಳಿಸಿದೆ ಎಂದವರು ಹೇಳಿದ್ದಾರೆ.