
ಭಾರತದಲ್ಲಿ ಭಾರೀ ಭೂಕಂಪದ ಸಾಧ್ಯತೆ; ಯಾವೆಲ್ಲ ಪ್ರದೇಶದಲ್ಲಿ ಭೂಕಂಪ ನಡೆಯ ಬಹುದು...? ಇಲ್ಲಿದೆ ಮಾಹಿತಿ...
![]() |
ಸಾಂದರ್ಭಿಕ ಚಿತ್ರ |
ಬೆಂಗಳೂರು: ಟರ್ಕಿ ಹಾಗು ಸಿರಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿ ಸಾವಿರಾರು ಮಂದಿ ಸಾವನ್ನಪ್ಪಿರುವ ಬೆನ್ನಲ್ಲೇ, ಭಾರತದಲ್ಲೂ ಭಾರೀ ಭೂಕಂಪದ ಸಾಧ್ಯತೆಯನ್ನು ಭೂವಿಜ್ಞಾನಿಯೊಬ್ಬರು ಹೇಳಿರುವುದು ಭೀತಿಯನ್ನು ಸೃಷ್ಠಿಸಿದೆ.
ಭಾರೀ ಭೂಕಂಪದ ಅಪಾಯದಲ್ಲಿ ಭಾರತವಿದ್ದು, ದೇಶದ ಕೆಲವು ಪ್ರದೇಶಗಳಲ್ಲಿ 7.5ಕ್ಕಿಂತಲೂ ಹೆಚ್ಚಿನ ತೀವ್ರತೆಯ ಭೂಕಂಪಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಭೂವಿಜ್ಞಾನಿ ಜಾವೇದ್ ಮಲಿಕ್ ಮುನ್ಸೂಚನೆ ನೀಡಿದ್ದಾರೆ.
ದೇಶದಲ್ಲಿ ಭಾರೀ ಭೂಕಂಪಗಳು ಮುಂದಿನ ಒಂದೆರೆಡು ದಶಕಗಳಲ್ಲಿ ಸಂಭವಿಸಬಹುದು ಅಥವಾ ಒಂದೆರಡು ವರ್ಷಗಳಲ್ಲೇ ಘಟಿಸಿದರೂ ಘಟಿಸಬಹುದು ಎಂಬುದಾಗಿ ಹೇಳಿರುವ ಜಾವೇದ್ ಮಲಿಕ್, ಭೂಕಂಪದ ಕೇಂದ್ರ ಬಿಂದುಗಳು ಹಿಮಾಲಯ ಶ್ರೇಣಿ ಅಥವಾ ಅಂಡಮಾನ್ ನಿಕೋಬಾರ್ ದ್ವೀಪಗಳಾಗುವ ಸಾಧ್ಯತೆ ಇದೆ. ಈ ಕಾರಣದಿಂದ ನಾವು ಬಹಳ ಎಚ್ಚರಿಕೆಯಿಂದ ಇರುವ ಜೊತೆಗೆ ಪ್ರತಿ ಹಂತದಲ್ಲಿಯೂ ನಿಗಾವಹಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ಭೂಕಂಪ ಪೀಡಿತ ಕಛ್, ಅಂಡಮಾನ್, ಉತ್ತರಾಖಂಡಗಳಲ್ಲಿ ದೀರ್ಘಾವಧಿಯಿಂದಲೂ ಅಧ್ಯಯನ ನಡೆಸುತ್ತಿರುವ ಜಾವೇದ್ ಮಲಿಕ್, ಭೂಕಂಪದ ದೃಷ್ಟಿಯಿಂದ ದೇಶದಲ್ಲಿ 5 ವಲಯಗಳು ರಚನೆಯಾಗಿವೆ ಎಂದಿದ್ದಾರೆ.
ಯಾವುದೆಲ್ಲ ಅತ್ಯಂತ ಅಪಾಯಕಾರಿ ಪ್ರದೇಶ...
ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಕಛ್, ಅಂಡಮಾನ್-ನಿಕೋಬಾರ್, ಹಿಮಾಲಯ ಪ್ರದೇಶ ಒಳಗೊಂಡಿದೆ. ‘ವಲಯ 4’ರಲ್ಲಿ ಬಹ್ರೈಚ್, ಲಖಿಂಪುರ, ಫಿಲಿಬಿತ್, ಗಾಜಿಯಾಬಾದ್, ರೂಕೀ, ನೈನಿತಾಲ್ ಹಾಗೂ ವಲಯ 3ರಲ್ಲಿ ಕಾನ್ಪುರ, ಲಖ್ನೋ, ಪ್ರಯಾಗ್ರಾಜ್, ವಾರಾಣಸಿ, ಸೋನ್ಭದ್ರಾಗಳು ಇವೆ.