ಹಿಂದುತ್ವಕ್ಕೆ ಮೋದಿಯ ಕೊಡುಗೆ ಶೂನ್ಯ; ಮೋದಿ ರಾಮಮಂದಿರವನ್ನು ಕೊನೆಯವರೆಗೂ ವಿರೋಧಿಸಿದ್ದರು: ಸುಬ್ರಮಣಿಯನ್ ಸ್ವಾಮಿ

ಹಿಂದುತ್ವಕ್ಕೆ ಮೋದಿಯ ಕೊಡುಗೆ ಶೂನ್ಯ; ಮೋದಿ ರಾಮಮಂದಿರವನ್ನು ಕೊನೆಯವರೆಗೂ ವಿರೋಧಿಸಿದ್ದರು: ಸುಬ್ರಮಣಿಯನ್ ಸ್ವಾಮಿ

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಹಿಂದುತ್ವಕ್ಕೆ ಕೊಟ್ಟ ಕೊಡುಗೆ ಶೂನ್ಯ ಎಂದಿರುವ BJP ನಾಯಕ ಸುಬ್ರಮಣಿಯನ್ ಸ್ವಾಮಿ, ರಾಮಮಂದಿರವನ್ನು ಮೋದಿ  ಕೊನೆಯವರೆಗೂ ವಿರೋಧಿಸಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಚೆನ್ನೈನ ಥಿಂಕ್‌ಎಡು ಕಾನ್‌ಕ್ಲೇವ್‌ನಲ್ಲಿ ‘ದಿ ಗ್ಲೋಬಲ್ ಹೈ ಟೇಬಲ್: ಕ್ಯಾನ್ ಇಂಡಿಯಾ ಬಿ ಎ ವಿಶ್ವಗುರು’ ಎಂಬ ವಿಷಯ ಕುರಿತು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸುಬ್ರಮಣಿಯನ್ ಸ್ವಾಮಿ ಅವರಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿರುವಾಗ ಮೋದಿ  ತಮ್ಮ ಸ್ನೇಹಿತ ಎಸ್ ಗುರುಮೂರ್ತಿ ಅವರನ್ನು ಅರ್ಜಿ ಸಲ್ಲಿಸಲು ಕರೆದೊಯ್ದಿದ್ದರು. ಮಂದಿರ ನಿರ್ಮಾಣಕ್ಕೆ ಮಂಜೂರಾದ ಭೂಮಿಯನ್ನು ವಾಪಸ್ ನೀಡಬೇಕು ಎಂದು ಪ್ರಧಾನಿ ಮೋದಿ ಬಯಸಿದ್ದರು. ಆದರೆ  ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು ಎಂದವರು ಹೇಳಿದರು.

ಚೀನಾ ಹಾಗು ಆರ್ಥಿಕ ನೀತಿಗಳ ಕುರಿತಾದ ಪ್ರಧಾನಿ ಮೋದಿಯ ನೀತಿಗಳನ್ನು ವಿರೋಧಿಸುವುದಾಗಿ ಹೇಳಿದ ಸುಬ್ರಮಣಿಯನ್ ಸ್ವಾಮಿ, ವಿಶ್ವಗುರುವಿನ ಪರಿಕಲ್ಪನೆಯಲ್ಲಿ, ಗಡಿ ಸಮಸ್ಯೆಗಳ ಬಗ್ಗೆ ಚೀನಾ ದೇಶಕ್ಕೆ ಮಿಲಿಟರಿ ಪ್ರತಿಕ್ರಿಯೆ ನೀಡಿದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ ಎಂದರು.

ವಿಶ್ವಗುರುವಾಗಲು ಬುದ್ಧಿವಂತಿಕೆ ಬಹಳ ಅಗತ್ಯ ಎಂದ ಅವರು, ಗುರುಗಳು, ಸಾಧುಗಳು ಹಗಲು ಸನ್ಯಾಸಿಗಳು 6 ವಿಭಿನ್ನ ರೀತಿಯ ಬುದ್ಧಿಮತ್ತೆಯನ್ನು ಹೊಂದಿರುತ್ತಾರೆ. ಅರಿವು, ಭಾವನಾತ್ಮಕ, ಸಾಮಾಜಿಕ, ನೈತಿಕ, ಪರಿಸರ ಮತ್ತು ಆದ್ಯಾತ್ಮಿಕತೆ ಇದೇ 6 ವಿಭಿನ್ನ ರೀತಿಯ ಬುದ್ಧಿಮತ್ತೆಯಾಗಿದೆ ಎಂದರು.

Ads on article

Advertise in articles 1

advertising articles 2

Advertise under the article